

ಮಂಗಳೂರು: Blackmail ಮತ್ತು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೈದ ಉದ್ಯಮಿ ಮುಮ್ತಾಜ್ ಆಲಿ ಸಾವಿಗೆ ಕಾರಣರಾದ ಆರೋಪಿಗಳನ್ನು ಸೊಮವಾರ ರಾತ್ರಿ 10 ಗಂಟೆ ವೇಳೆ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸೂತ್ರಧಾರೆ ಎನ್ನಲಾದ ಮಹಿಳೆ, ಆಕೆಯ ಪತಿ ಮತ್ತು ಇನ್ನೊಬ್ಬ ಆರೋಪಿಯನ್ನು ಪೊಲೀಸರು ಕಲ್ಲಡ್ಕದಲ್ಲಿ ಬಂಧಿಸಿದ್ದಾರೆ.
ಸೋಮವಾರ ಉದ್ಯಮಿ ಮುಮ್ತಾಜ್ ಆಲಿ ಸಾವಿಗೆ ಆರು ಮಂದಿಯ ತಂಡ ನಡೆಸಿದ ಬ್ಲಾಕೇಲ್ ಕಾರಣ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಸೇರಿದಂತೆ ಎರಡು ವಿಶೇಷ ತಂಡ ತನಿಖೆ ಆರಂಭಿಸಿ ಆರೋಪಿ ಎನ್ನಲಾದ ಆಯೆಷಾ ರೆಹ್ಮತ್ ಮತ್ತು ಆಕೆಯ ಪತಿ ಶೋಯಿಬ್ ಹಾಗೂ ಸಿರಾಜ್ ಎಂಬವರನ್ನು ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ಬಂಧಿಸಿರುವ ಮಾಹಿತಿ ವಿಜಯವಾನಿಗೆ ಲಭ್ಯವಾಗಿದೆ. ಆರೋಪಿಗಳು ಕಲ್ಲಡ್ಕ-ವಿಟ್ಲ ಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ. ಆದರೆ ಈ ಬಂಧನವನ್ನು ಪೊಲೀಸರು ದೃಡಪಡಿಸಿಲ್ಲ. ಇದೇ ವೇಳೆ ಅಬ್ದುಲ್ ಸತ್ತಾರ್ ಮತ್ತು ಶಾಫಿ ನಂದಾವರ ಸೇರಿದಂತೆ ಇತರ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಣಕ್ಕಾಗಿ ಭಾರಿ ಡಿಮ್ಯಾಂಡ್
ವಿಜಯವಾಣಿಗೆ ಲಭ್ಯ ಮಾಹಿತಿಯಂತೆ ಸುರತ್ಕಲ್ನಲ್ಲಿ ಉದ್ಯಮಿ ಮುಮ್ತಾಜ್ ಆಲಿ ನಡೆಸುತ್ತಿದ್ದ ಕಾಲೇಜಿನಲ್ಲಿ ಕೆಲಸಕ್ಕಿದ್ದ ಮಹಿಳೆ. ಈ ವೇಳೆ, ಮುಲ್ತಾಜ್ ಆಲಿಯವರ ಜೊತೆಗೆ ಹತ್ತಿರದ ಒಡನಾಟ ಇರಿಸಿಕೊಂಡಿದ್ದರು. ಇದೇ ನೆಪದಲ್ಲಿ ಆರೋಪಿ ಮಹಿಳೆ, ಮುಲ್ತಾಜ್ ಆಲಿಯವರನ್ನು Blackmail ಮಾಡಲು ಮುಂದಾಗಿದ್ದು, ಇದಕ್ಕೆ ಆಕೆಯ ಪತಿ ಶೋಯಿಬ್ ಸಹಕಾರ ನೀಡಿದ್ದ. ಅಲ್ಲದೆ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಸತ್ತಾರ್ ಮತ್ತು ಮರಳು ದಂಧೆಕೋರ ಶಾಫಿ ನಂದಾವರ ಸೇರಿಕೊಂಡು ಉದ್ಯಮಿ ಮುಮ್ತಾಜ್ ಆಲಿನ್ನು ಹಣಕ್ಕಾಗಿ Blackmail ಮಾಡಲು ತೊಡಗಿದ್ದರು. ಕಳೆದ 3-4 ತಿಂಗಳಿನಿಂದ 50 ಲಕ್ಷಕ್ಕೂ ಹೆಚ್ಚು ದುಡ್ಡನ್ನು ಪೀಕಿಸಿಕೊಂಡಿರುವ ಈ ತಂಡವು, ಎರಡು ಕೋಟಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿರುವ ಮಾಹತಿ ಪೊಲೀಸರಿಗೆ ಲಭ್ಯವಾಗಿದೆ.
-----------------
Blackmailers ವಿರುದ್ಧ ಪ್ರಕರಣ
ಕಲ್ಲಡ್ಕದಲ್ಲಿ ಸೋಮವಾರ ರಾತ್ರಿ ಬಂಧಿತರಾದ ಪ್ರಕರಣದ ಸೂತ್ರಧಾರೆಯನ್ನು ಬೆಂಡೆತ್ತಿದ ಪೊಲೀಸರು ಹಲವು ಸ್ಟೋಟಕ ಮಾಹಿತಿ ಕಲೆ ಹಾಕಿದ್ದರು. ಉದ್ಯಮಿ ಮುಮ್ತಾಜ್ ಆಲಿ ತನ್ನ ಮಗುವಿನ ಜೊತೆಗೆ ಆಟವಾಡುತ್ತಿದ್ದ ವಿಡಿಯೋವನ್ನು ಮಾಡಿ, ಆರೋಪಿಗಳು ಆಲಿಯವರ ಕುಟುಂಬಸ್ಥರಿಗೆ ಕಳುಹಿಸತೊಡಗಿದ್ದರು. ಈ ವಿಡಿಯೋ ಕಾರಣದಿಂದ ಉದ್ಯಮಿ ಮುಮ್ತಾಜ್ ಆಲಿ ತನ್ನ ಕುಟುಂಬಸ್ಥರ ನಡುವೆ ನಿಂದನೆಗೆ ಒಳಗಾಗಿದ್ದರು. ಇದೇ ಹಿಂಸೆಯಿಂದಾಗಿ ಉದ್ಯಮಿ ಮುಮ್ತಾಜ್ ಆಲಿ ಸಾಯಲು ಮುಂದಾಗಿದ್ದು, ಭಾನುವಾರ ನಡುರಾತ್ರಿಯೇ ಮನೆ ಬಿಟ್ಟು ಬಂದಿದ್ದರು. ಇದೇ ಹಿಂಸೆಯಿಂದ ನಸುಕಿನ ಹೊತ್ತಿಗೆ ಕಾರನ್ನು ಕುಳೂರಿನ ಸೇತುವೆಯಲ್ಲಿ ಬಿಟ್ಟು ನದಿಗೆ ಹಾರಿ ದುರಂತ ಸಾವಿಗೀಡಾಗಿದ್ದಾರೆ. ಸದ್ಯಕ್ಕೆ ಆರು ಮಂದಿ Blackmailers ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.