ಆತ್ಮಹತ್ಯೆಗೆ ಬಯಸಿದ 8 ಮಹಿಳೆಯರನ್ನು ಕೊಂದ ಟ್ವಿಟರ್​ ಕಿಲ್ಲರ್​!: ಯಾರೀ ಸೈಕೋ..? | Twitter Killer

dk - 2025-06-27T211306.440
Published on

Twitter Killer: ತಮ್ಮ ಎಕ್ಸ್​ (ಈ ಹಿಂದೆ ಟ್ವಿಟರ್​ ಎಂದು ಕರೆಯಲಾಗುತ್ತಿತ್ತು) ಖಾತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಹಾಯ ಮಾಡಿ ಎಂದು ಬರೆದುಕೊಂಡಿದ್ದ ಅಥವಾ ಆತ್ಮಹತ್ಯೆ ಭಾವನೆಯುಳ್ಳ 8 ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಂದಿರುವ ಘಟನೆ ಜಪಾನ್​ನಲ್ಲಿ ಈ ಹಿಂದೆ ನಡೆದಿದ್ದು, ಇದೀಗ ಈ ಟ್ವಿಟರ್​ ಕಿಲ್ಲರ್​ಗೆ ಇಂದು(ಜೂ.27) ಗಲ್ಲಿಗೇರಿಸಲಾಗಿದೆ.

ಆರೋಪಿ 2017ರಲ್ಲಿ 8 ಮಹಿಳೆಯರು ಸೇರೆ ಒಬ್ಬ ಪುರುಷನನ್ನು ಅತ್ಯಾಚಾರ ಮಾಡಿ ಕೊಂದು, ಶವಗಳನ್ನು ತುಂಡು-ತುಂಡಾಗಿ ಮಾಡಿ ಕೋಲ್ಡ್ ಸ್ಟೋರೇಜ್​ನಲ್ಲಿ ಇಟ್ಟಿದ್ದ. ಪ್ರಕರಣ ಭೇದಿಸಿದ ಪೊಲೀಸರು ಈ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. 2022ರಲ್ಲಿ ಇತನಿಗೆ(ಟ್ವಿಟರ್​ ಕಿಲ್ಲರ್​) ಕೋರ್ಟ್​ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು. ಇದೀಗ ಇಂದು ಗಲ್ಲಿಗೇರಿಸಲಾಗಿದೆ.

ಯಾರೀ ಟ್ವಿಟರ್​ ಕಿಲ್ಲರ್​..?

ಜಪಾನ್​ನಲ್ಲಿ 'ಟ್ವಿಟರ್​ ಕಿಲ್ಲರ್'​ ಎಂದೇ ಬಿಂಬಿತವಾಗಿರುವ ಈ ಸೈಕೋನ ಅಸಲಿ ಹೆಸರು ತಕಹಿರೋ ಶಿರೈಶಿ. ಎಕ್ಸ್ ನಂತಹ ವೇದಿಕೆಗಳಲ್ಲಿ ತಮ್ಮ ಪೋಸ್ಟ್‌ಗಳಲ್ಲಿ ಜೀವನದ ಬಗ್ಗೆ ಹತಾಶೆಯನ್ನು ತೋರಿಸಿದ ಅನೇಕ ಜನರಿದ್ದರು. ಅವರ ಪೋಸ್ಟ್‌ಗಳು ಆತ್ಮಹತ್ಯಾ ಮನೋಭಾವದ್ದಾಗಿದ್ದವು.(ಆತ್ಮಹತ್ಯೆಗೆ ಬಯಸಿದ ಬರಹಗಳಾಗಿದ್ದವು) ಇಂತಹವರನ್ನು ಸಂಪರ್ಕಿಸಿದ ಶಿರೈಶಿ, ಅವರನ್ನು ಟೋಕಿಯೋದ ಅಪಾರ್ಟಮೆಂಟ್​ನಲ್ಲಿ ಕರೆಯಿಸಿ ಅತ್ಯಾಚಾರ ಮಾಡಿ, ಕೊಲೆ ಮಾಡುತ್ತಿದ್ದ. ಇದನನ್ನು ತಿಳಿದ ತನ್ನ ಸ್ನೇಹಿತನನ್ನು ಕೂಡ ಕೊಂದಿದ್ದಾನೆ.

ಜಪಾನ್‌ನ ನ್ಯಾಯ ಸಚಿವಾಲಯವು ಈ ಮಾಹಿತಿಯನ್ನು ದೃಢಪಡಿಸಿದೆ. 2022ರ ನಂತರ ಜಪಾನ್‌ನಲ್ಲಿ ಯಾರಿಗಾದರೂ ಮರಣದಂಡನೆ ವಿಧಿಸಲಾಗುತ್ತಿರುವುದು ಇದೇ ಮೊದಲು. ಶಿರೈಶಿಯನ್ನು ಟೋಕಿಯೊ ಬಂಧನ ಭವನದಲ್ಲಿ ಅತ್ಯಂತ ಗೌಪ್ಯವಾಗಿ ಗಲ್ಲಿಗೇರಿಸಲಾಯಿತು. ಅವರ ಮರಣದ ನಂತರ ಅಧಿಕಾರಿಗಳು ಈ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net