ಶ್ರೀವಾಣಿ ಕ್ಷೇತ್ರದಲ್ಲಿ ಸಾವಿರಾರು ಭಕ್ತರ ನಡುವೆ ಸಂಭ್ರಮದ ರಥಯಾತ್ರೆ ಆಚರಣೆ | Rath Yatra

dk - 2025-06-27T201655.268
Published on

ಭುವನೇಶ್ವರ: ಪ್ರತಿ ವರ್ಷದಂತೆ, ಈ ಬಾರಿಯೂ ಕೆಐಎಸ್ಎಸ್(KISS)ನ ಶ್ರೀವಾಣಿ ಕ್ಷೇತ್ರದಲ್ಲಿ ಬಹುನಿರೀಕ್ಷಿತ ರಥಯಾತ್ರೆಯನ್ನು(Rath Yatra) ಶುಕ್ರವಾರ ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮದ ನಡುವೆ ಆಚರಿಸಲಾಯಿತು.

ಬೆಳಗಿನ ಜಾವ ನಿಗದಿತ ಸಮಯದಲ್ಲಿ "ಮಂಗಳ ಆರತಿ, ಮೈಲಾಮ, ತಡಪಲಗಿ, ರೋಷ ಹೋಮ, ಅಬಕಾಶ, ಸೂರ್ಯ ಪೂಜೆ" ಮತ್ತು ರಥಗಳ ಸ್ಥಾಪನೆಯಂತಹ ಧಾರ್ಮಿಕ ಸಮಾರಂಭಗಳನ್ನು ನಡೆದವು. ಅಲ್ಲದೆ, ಅಚ್ಯುತ ಸಮಂತರು ಮಧ್ಯಾಹ್ನ 3 ಗಂಟೆಗೆ "ಛೇರ ಪಹನ್ರ" ವನ್ನು ನಡೆಸಿದರು. ಸಂಜೆ 4ರ ಸುಮಾರಿಗೆ ಸಾವಿರಾರು ಭಕ್ತರು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರ ಅವರ ಮೂರು ಅಲಂಕೃತ ರಥಗಳನ್ನು ಕೆಐಐಟಿ-ಸಿಖರಚಂಡಿ ರಸ್ತೆಯ ಬಳಿಯಲ್ಲಿರುವ ಗುಂಡಿಚಾ ದೇವಸ್ಥಾನಕ್ಕೆ ಎಳೆಯುವಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು.

ಮಹಿಳೆಯರು ಮಾತ್ರ ಎಳೆಯುವ ಸುಭದ್ರೆಯ ರಥ

ಕೆಐಎಸ್ಎಸ್ ಬಳಿಯ "ರಥ ದಂಡ"ದ ಉದ್ದಕ್ಕೂ ಸಾಂಪ್ರದಾಯಿಕ ಸಂಗೀತ ವಾದ್ಯಗಳು, ಧಾರ್ಮಿಕ ಗಾಯನ ಮತ್ತು ಜಯ ಜಗನ್ನಾಥ ಘೋಷಣೆ ಭಕ್ತರಿಂದ ತುಂಬಿತ್ತು. ರಥಯಾತ್ರೆಯ ವಿಶೇಷತೆಯೆಂದರೆ ದೇವಿ ಸುಭದ್ರೆಯ ರಥವನ್ನು ಮಹಿಳಾ ಭಕ್ತರು ಮಾತ್ರ ಎಳೆಯುತ್ತಾರೆ. ಇಂದು 50,000 ಕ್ಕೂ ಅಧಿಕ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ಭಗವಾನ್ ಬಲಭದ್ರ, ಜಗನ್ನಾಥ ಮತ್ತು ದೇವಿ ಸುಭದ್ರೆಯ ಮೂರು ರಥಗಳು ಕ್ರಮವಾಗಿ 16, 14 ಮತ್ತು 12 ಚಕ್ರಗಳನ್ನು ಹೊಂದಿವೆ. ಮೂರು ಸುಂದರವಾದ ರಥಗಳ ನಿರ್ಮಾಣಕ್ಕಾಗಿ ಶ್ರೀವಾಣಿ ಕ್ಷೇತ್ರ ದೇವಾಲಯ ಟ್ರಸ್ಟ್ ವಿಶೇಷ "ಬಿಂಧನಿ", "ಮಹಾರಣ" ಮತ್ತು "ಚಿತ್ರಕಾರ" ಗಳನ್ನು ತೊಡಗಿಸಿಕೊಂಡಿದೆ. ಈ 9 ದಿನಗಳ ಉತ್ಸವದಲ್ಲಿ, ಗುಂಡಿಚಾ ದೇವಾಲಯದ ಬಳಿ ಪ್ರತಿದಿನ ಸಂಜೆ "ಭಜನ್ ಸಮರೋಹ್" ಇರುತ್ತದೆ.

ಶ್ರೀಬನಿ ಕ್ಷೇತ್ರದಲ್ಲಿ ಜಗನ್ನಾಥ ದೇವಾಲಯದ ನಿರ್ಮಾಣದಿಂದ ಪ್ರಾರಂಭಿಸಿ ಎಲ್ಲಾ ಆಚರಣೆಗಳು ಪುರಿಯ ಗಜಪತಿ ಮಹಾರಾಜ ಶ್ರೀ ದಿಬ್ಯಾಸಿಂಗ ದೇಬ್ ಅವರ ಸಮಾಲೋಚನೆ ಮತ್ತು ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net