ಅಕ್ಷಯ್​​ ಕುಮಾರ್​​​​ ಮಗಳು ನಿತಾರಾ ಹೇಗಿದ್ದಾಳೆ ಗೊತ್ತಾ..? ಅಮ್ಮನನ್ನೇ ಹೋಲುತ್ತಳೆ ಎಂದ ಪಾಪರಾಜಿಗಳು..!

ತmixxxxx
Published on

ಬಾಲಿವುಡ್​​ನಲ್ಲಿ ಸಖತ್​​ ಫಿಟ್​​​ ಎಂದೇ ಹೆಸರುವಾಸಿಗಿರುವ ಅಕ್ಷಯ್​​ ಕುಮಾರ್​​ ಮಗಳು ಇದೀಗ ಪಾಪರಾಜಿ ಕಣ್ಣಿಗೆ ಬಿದ್ದಿದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ.


ವಿಮಾನ ನಿಲ್ದಾಣದಲ್ಲಿ ಅಕ್ಷಯ್​​ ಪತ್ನಿ ಟ್ವಿಂಕಲ್​ ಖನ್ನಾ ಮತ್ತು ನಿತಾರಾ ಜತೆಯಾಗಿ ಓಡಾಡುತ್ತಿರೋದನ್ನ ಪಾಪರಾಜಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ತಾಯಿ-ಮಗಳ ಜೋಡಿಯ ನಡುವಿನ ಹೋಲಿಕೆ ತುಂಬಾನೆ ಇದೆ ಎಂದು ಪಾಪರಾಜಿಗಳು ಜೋರಾಗಿ ಕೂಗಿ ಹೇಳಿದ್ದಾರೆ. ಬಾಲಿವುಡ್ ನಟಿ ಟ್ವಿಂಕಲ್​ ಖನ್ನಾ ಮತ್ತು ಅವರ ಮಗಳು ವಿಮಾನ ನಿಲ್ದಾಣದ ಬಳಿ ಸಾಗೋದನ್ನ ಇದೀಗ ವೈರಲ್​ ಆದ ವಿಡಿಯೋದಲ್ಲಿ ಕಾಣಬಹುದು.


ವೈರಲ್ ಭಯಾನಿ ಅವರು ಇನ್ಸ್​​​ಟಾಗ್ರಾಂ ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಟ್ವಿಂಕಲ್ ಖನ್ನಾ ಕಪ್ಪು ಡ್ರೆಸ್​​​ ಧರಿಸಿದ್ದು, ಮಗಳು ನಿತಾರಾಳ ಅವರ ಕೈಯನ್ನು ಹಿಡಿದಿದ್ದಾಳೆ.


ನಿತಾರಾ ಕಪ್ಪು ಪ್ಯಾಂಟ್​​​ಗೆ ಬಿಳಿ ಬಣ್ಣದ ಸ್ವೆಟ್​​ ಶರ್ಟ್​​​ ಧರಿಸಿದ್ದು, ಫ್ರೀ ಹೇರ್ಸ್​​ ಬಿಟ್ಟು ನಡೆದು ಹೋಗುತ್ತಿರುವುದನ್ನ ಕಂಡು ಜನರು ನಿತಾರಾ ಅಮ್ಮ ಟ್ವಿಂಕಲ್​ ಖನ್ನಾರನ್ನೇ ಹೋಲುತ್ತಾಳೆ ಎಂದು ಕಾಮೆಂಟ್​​ ಮಾಡಿದ್ದಾರೆ. ಮದುವೆಯಾದ ದಿನದಿಂದಲೇ ಟ್ವಿಂಕಲ್​ ಮತ್ತು ಅಕ್ಷಯ್​ ಕುಮಾರ್​ ನಡುವೆ ಪ್ರೀತಿ ಹೆಚ್ಚಾಗುತ್ತಾ ಹೋಗಿದೆ.


ಹಲವಾರು ಇತರ ಬಾಲಿವುಡ್ ಜೋಡಿಗಳಂತೆ, ಅಕ್ಷಯ್ ಮತ್ತು ಟ್ವಿಂಕಲ್ ಕೂಡ ಪ್ರೀತಿ ಮತ್ತು ಸಂಬಂಧಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.

ಸದ್ಯ ಪಾಪರಾಜಿಗಳು ಅಕ್ಷಯ್​ ಕುಮಾರ್​​ ಮತ್ತು ಟ್ವಿಂಕಲ್​ ಖನ್ನಾ ಮಗಳು ಅಮ್ಮನನ್ನೇ ಹೋಲುತ್ತಾಳೆ ಎಂಬ ವಿಡಿಯೋಗೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net