100 ಆಮ್ಲಜನಕ ಸಾಂದ್ರಕ, 1 ಕೋಟಿ ರೂ.​ ದೇಣಿಗೆ ನೀಡಿದ ಟಿವಿಎಸ್​

tvs
Published on

ಬೆಂಗಳೂರು : ಕರೊನಾ ಸೋಂಕಿನ ಉಲ್ಬಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಟಿ.ವಿ.ಎಸ್. ಮೋಟಾರ್ ಸಂಸ್ಥೆಯು 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳು ಮತ್ತು ವೈದ್ಯಕೀಯ ಪರಿಕರಗಳನ್ನು ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದೆ.

ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದೆ. ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪನವರು ಕಂಪೆನಿಯ ಆಡಳಿತ ಮಂಡಳಿ ಸದಸ್ಯರಿಂದ ಚೆಕ್ ಮತ್ತು ಉಪಕರಣಗಳನ್ನು ಸ್ವೀಕರಿಸಿದರು. ಕಳೆದ ವರ್ಷ ಕರೊನಾ ಸೋಂಕಿನ ಆಗಮನದ ಸಂದರ್ಭದಲ್ಲಿ ಪಿಪಿಇ ಕಿಟ್​ಗಳನ್ನು ಮತ್ತು ಎನ್​95 ಮಾಸ್ಕ್​ಗಳನ್ನು ಟಿವಿಎಸ್​ ಮೋಟಾರ್ ಕಂಪೆನಿ ದೇಣಿಗೆಯಾಗಿ ನೀಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net