ನಿನ್ನ ಶಾಶ್ವತ ವಿದಾಯ ಸಹಿಸಲಾಗುತ್ತಿಲ್ಲ; ಮಲ್ಲಮ್ಮನನ್ನ BBK12ಗೆ ಕಳುಹಿಸಲು ನೆರವಾಗಿದ್ದ ಪಲ್ಲವಿ ಇನ್ನಿಲ್ಲ, ಕೃಷಿ ತಾಪಂಡ ಭಾವುಕ ಪೋಸ್ಟ್

Pallavi Lakshmikanth Designer Who Sent Mallamma to Bigg Boss Dies
Pallavi Lakshmikanth Designer Who Sent Mallamma to Bigg Boss Dies
Published on
Pallavi Lakshmikanth Designer Who Sent Mallamma to Bigg Boss Dies:ಲೆಮನ್​ ಟೀ ವಿಚಾರಕ್ಕೆ, ಮುಗ್ಧತೆಗೆ, ಹಿರಿ ವಯಸ್ಸಿನಲ್ಲೂ ಇದ್ದ ಗಟ್ಟಿತನಕ್ಕೆ ಹೆಸರಾದ ಮಲ್ಲಮ್ಮ ಬಿಗ್​ಬಾಸ್​​ನಲ್ಲಿ ಭಾರಿ ಸದ್ದು ಮಾಡಿದ್ದರು. ಅಂತಹ ದೊಡ್ಡ ವೇದಿಕೆಯನ್ನೇರಲು ಕಾರಣರಾದ ರಿಷಿ ಬೊಟಿಕ್​ ಉದ್ಯಮಿ, ಹಲವಾರು ನಟ-ನಟಿಯರ ಬಟ್ಟೆ ಡಿಸೈನರ್​ ಪಲ್ಲವಿ ಲಕ್ಷ್ಮಿಕಾಂತ್ ಸೆ.20ರಂದು​ ನಿಧನರಾಗಿದ್ದಾರೆ. ಈ ಬಗ್ಗೆ ಕೃಷಿ ತಾಪಂಡ ಸೇರಿದಂತೆ ಸಿನಿಮಾ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಮಲ್ಲಮ್ಮನಿಗೆ ಬ್ಯಾಕ್​ಬೋನ್

ಉತ್ತರ ಕರ್ನಾಟಕದ ಮನೆ ಮಗಳಾದ ಮಲ್ಲಮ್ಮ ತಮ್ಮ ಮುಗ್ಧತೆಗೆ ಹೆಸರಾಗಿದ್ದರು. ಇನ್​ಸ್ಟಾಗ್ರಾಮ್​ ರೀಲ್ಸ್​ ಮೂಲಕ ಅವರು ಹಲವರ ಗಮನ ಸೆಳೆದಿದ್ದರು. ಅವರು ಬಿಗ್​ಬಾಸ್​​ 12ಕ್ಕೆ ಕಾಲಿಟ್ಟಿದ್ದರು. ಮಲ್ಲಮ್ಮಗೆ ರಿಶಿ ಬೊಟಿಕ್​ನಲ್ಲಿಯೇ ಕೆಲಸ ಮತ್ತು ಆಶ್ರಯ ಕೊಟ್ಟು ನೋಡಿಕೊಳ್ಳುತ್ತಿದ್ದರು.
ಮಲ್ಲಮ್ಮ ಎಲಿಮಿನೇಟ್ ಆದ ಸಂದರ್ಭದಲ್ಲಿಯೂ ವೇದಿಕೆಗೆ ಬಂದು ಸ್ವಾಗತಿಸಿದ್ದರು. ನಂತರ ಅವರ ಮನೆಗೆ ದಿಢೀರ್​ ಭೇಟಿ ಕೊಟ್ಟು ಪಾರ್ಟಿ ಕೊಟ್ಟಿದ್ದರು. ಮಲ್ಲಮ್ಮ ಜೊತೆಗೆ ಅವರು ಮಾಡುತ್ತಿದ್ದ ರೀಲ್ಸ್​ಗಳು ಸಾಕಷ್ಟು ವ್ಯೂವ್ಸ್​ ಪಡೆದುಕೊಳ್ಳುತ್ತಿತ್ತು. ಅಷ್ಟೇ ಅಲ್ಲದೇ ಮಲ್ಲಮ್ಮ ಇತ್ತೀಚೆಗೆ ವಸ್ತುಗಳನ್ನು ಸಹ ಪ್ರಮೋಟ್​ ಮಾಡುತ್ತಿದ್ದರು. ಇದೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದು ಪಲ್ಲವಿ ಅವರು. ಇಂತಹ ಒಳ್ಳೆಯ ಮನಸ್ಸುಳ್ಳ ಪಲ್ಲವಿಯನ್ನು ಕಳೆದುಕೊಂಡಿರುವುದು ಮಲ್ಲಮ್ಮನವರಿಗೆ ಅಘಾತವನ್ನು ತಂದೊಡ್ಡಿದೆ.

ಕೃಷಿ ತಾಪಂಡ ಪೋಸ್ಟ್​ನಲ್ಲಿ ಏನಿದೆ?

ಪಲ್ಲು ಮಿಸ್​ ಯೂ. ಎಲ್ಲದಕ್ಕೂ ಧನ್ಯವಾದ. ನೀನು ಕಳೆದ ಒಂದು ವರ್ಷದಿಂದ ನನ್ನೊಟ್ಟಿಗಿದ್ದದ್ದಕ್ಕೆ ಧನ್ಯವಾದ. ನಿನ್ನ ಶಾಶ್ವತ ವಿದಾಯ ತಡೆದುಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಕಡೆಯ ಸಲ ನಾವು ಒಟ್ಟಾಗಿ ನಕ್ಕಿದ್ದೆವು. ಆಗಲೇ ನಾನು ನೋಡುತ್ತಿರುವುದು ನಿನ್ನ ಕಡೆ ನಗು ಎಂದು ತಿಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನಿನ್ನ ಅಪ್ಪುಗೆ ಇನ್ನೊಮ್ಮೆ ನನಗೆ ಸಿಗಬಾರದಿತ್ತೆ ಎಂದು ಭಾವುಕರಾಗಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಾರು ಪಲ್ಲವಿ?

ಪಲ್ಲವಿ ಅವರು ಸದ್ಯ ಬಿಗ್​ಬಾಸ್ ಮನೆಯಲ್ಲಿರುವ ಆಸಿಯಾ ಅವರಿಗೆ ಸಾಕಷ್ಟು ಡಿಸೈನ್ ಬ್ಲೌಸ್, ಸ್ಯಾರಿಯನ್ನು ಕಳುಹಿಸಿದ್ದಾರೆ. ಇನ್ನೂ ಅವರು ಕೃಷಿ ತಾಪಂಡ, ಅಣ್ಣಯ್ಯ ಸಿನಿಮಾ ಖ್ಯಾತಿಯ ಮಧು ಅವರಿಗೆ, ಪ್ರೇಮಾ, ಸಂಗೀತಾ ಭಟ್, ಅನುಪಮಾ, ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ನಟ ಮನೋಜ್​ ಸೇರಿದಂತೆ ಸಾಕಷ್ಟು ಜನರ ಬಟ್ಟೆ ಡಿಸೈನ್​ ಮಾಡಿ ಕೊಟ್ಟಿದ್ದಾರೆ. ಗೌರಿ ಕಲ್ಯಾಣ ಸೀರಿಯಲ್​ ನಟಿ ಶಿಲ್ಪಾ ಕಾಮತ್, ನೀತಾ ಅಶೋಕ್​ ಅವರಿಗೂ ಇವರೇ ಅಚ್ಚುಮೆಚ್ಚು ಒಟ್ಟಾರೆಯಾಗಿ ಕಿರುತರೆ ಲೋಕ ಇವರನ್ನು ಕಳೆದುಕೊಂಡು ಶಾಕ್​ನಲ್ಲಿದೆ. ಹಲವರು ಸಂತಾಪ ಸೂಚಿಸುತ್ತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net