Bigg Boss ಮನೆಯಲ್ಲಿ ಈ ವಾರ ಎಮರ್ಜೆನ್ಸಿ ಎಕ್ಸಿಟ್; ನಿದ್ದೆ ಮಂಪರಿನಲ್ಲಿದ್ದ ಸ್ಪರ್ಧಿಗಳಿಗೆ ನಾಮಿನೇಟ್ ಶಾಕ್

Emergency exit for contestants this week in biggboss
Emergency exit for contestants this week in biggboss
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್‌ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಬಿಗ್‌ ಶಾಕ್ ಎದುರಾಗಿದೆ.
  • ಸ್ಪರ್ಧಿಗಳಿಗೆ ಎಮರ್ಜೆನ್ಸಿ ಎಕ್ಸಿಟ್ (ತುರ್ತು ನಿರ್ಗಮನ) ಎಚ್ಚರಿಕೆ ನೀಡಲಾಗಿದೆ.
  • ಪ್ರತಿಯೊಬ್ಬ ಕಂಟೆಸ್ಟೆಂಟ್ ಅನ್ನು ಖುದ್ದಾಗಿ ನಾಮಿನೇಟ್ ಮಾಡಲಾಗುತ್ತಿದೆ ಎಂದ ಸುದೀಪ್.
Emergency exit for contestants this week in biggboss ಬಿಗ್‌ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ದೊಡ್ಡ ತಿರುವು ಸಿಕ್ಕಿದೆ. ಈ ವಾರ 'ಎಮರ್ಜೆನ್ಸಿ ಎಕ್ಸಿಟ್' ಇದ್ದು, ಎಲ್ಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್​ ಆಗಿದ್ದಾರೆ ಎಂದು ಗಾಢ ನಿದ್ದೆಯಲ್ಲಿದ್ದ ಸ್ಪರ್ಧಿಗಳಿಗೆ ಬಿಗ್​ಬಾಸ್​ ಶಾಕ್​ ಕೊಟ್ಟಿರುವ ಪ್ರೋಮೋ ರಿಲೀಸ್ ಮಾಡಲಾಗಿದೆ.
ಬಿಗ್​ಬಾಸ್ ಶುರುವಾದ ಮೊದಲ ವಾರ ಪ್ರಥಮಾ ಪ್ರಸಾದ್ ಅವರು ಎಲಿಮಿನೇಟ್​ ಆದರು. ಆನಂತರ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಆರೋಗ್ಯ ಸಮಸ್ಯೆಯ ಕಾರಣದಿಂದ ಬಿಗ್ ಬಾಸ್ ಪಯಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಹೀಗಾಗಿ ಈ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. 

ಕಿರಣ್​, ಮಂಜುಗೆ ಪ್ರ್ಯಾಂಕ್

ಆದರೂ, ಮನೆಯಲ್ಲಿ ಕಿರಣ್ ಶಾಸ್ತ್ರಿ ಮತ್ತು ಮಂಜು ಅವರ ಮಾತಿಗೆ ಕಡಿವಾಣ ಹಾಕಲು, ಬಿಗ್ ಬಾಸ್ ತಂಡ ಫೇಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿತು. ನಂತರ ಅವರಿಬ್ಬರು ಮತ್ತೆ ಮನೆಗೆ ಕಾಲಿಟ್ಟರು. ಆದರೆ ಈಗ ರಿಲೀಸ್ ಆದ ಪ್ರೋಮೋದಲ್ಲಿ ನಿದ್ದೆ ಮಂಪರಿನಲ್ಲಿದ್ದ ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಅದೇ 'ಎಮರ್ಜೆನ್ಸಿ ಎಕ್ಸಿಟ್'. ಈ ವಾರ ಪ್ರತಿಯೊಬ್ಬ ಸ್ಪರ್ಧಿಯೂ ನೇರವಾಗಿ ನಾಮಿನೇಟ್ ಆಗಿದ್ದಾರೆ ಮತ್ತು ಈ ವಾರ ಎಮರ್ಜೆನ್ಸಿ ಎಕ್ಸಿಟ್ ಇರಲಿದೆ ಎಂದು ಸುದೀಪ್ ಅವರು ಪ್ರೋಮೋದಲ್ಲಿ ಹೇಳಿದ್ದಾರೆ.

ಎಮರ್ಜೆನ್ಸಿ ಎಕ್ಸಿಟ್ ಶಾಕ್

ಪ್ರೊಮೋದಲ್ಲಿ ಏನಿದೆ, ಸ್ಪರ್ಧಿಗಳು ಗಾಢ ನಿದ್ದೆಯಲ್ಲಿರುವ ಸೈರನ್​ ಮೊಳಗುತ್ತದೆ. ಎಲ್ಲ ಸ್ಪರ್ಧಿಗಳು ಎದ್ದು ಬರುತ್ತಾರೆ. ಆಗ ಸುದೀಪ್​ ಅವರು ಮಾತನಾಡಿರುವ ವಿಡಿಯೋ  ಪ್ರಸಾರ ಮಾಡಲಾಗಿದೆ. ಅವರು ಹೇಳಿದ್ದು ಹೀಗೆ ಈ ವಾರ ಮನೆಯಲ್ಲಿ ಒಂದು ಎಮರ್ಜೆನ್ಸಿ ಎಕ್ಸಿಟ್ ಇದೆ.   ಈ ವಾರ ಪ್ರತಿಯೊಬ್ಬ ಸ್ಪರ್ಧಿಯನ್ನು ಖುದ್ದಾಗಿ ನಾಮಿನೇಟ್ ಮಾಡಲಾಗುತ್ತಿದ್ದು, ಯಾವಾಗ ಏನು ಬೇಕಾದರೂ ಆಗಬಹುದು. ಆದ್ದರಿಂದ ಎಲ್ಲರೂ 'ಎಮರ್ಜೆನ್ಸಿ ಎಕ್ಸಿಟ್' (ತುರ್ತು ನಿರ್ಗಮನ) ಗಾಗಿ ಸಿದ್ಧರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ. ಗೆಟ್​ ರೆಡಿ ಫಾರ್​ ಎಮರ್ಜೆನ್ಸಿ ಎಕ್ಸಿಟ್​ ಎಂದು ಹೇಳಿದ್ದಾರೆ, (ಏಜೆನ್ಸೀಸ್) .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net