ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

blank

Battery Drain: ಇದು ಸ್ಮಾರ್ಟ್​ಫೋನ್ ಯುಗ. ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಇಂದು. ಹಿಂದೆಲ್ಲ ಕೀಪ್ಯಾಡ್​ ಬಟನ್​ಗಳ ಮೊಬೈಲ್​ ಹೆಚ್ಚು ಬಳಕೆಯಲ್ಲಿತ್ತು. ಇದರ ಬ್ಯಾಟರಿ ಬ್ಯಾಕಪ್​ ಕೂಡ ಅಷ್ಟೇ ಚೆನ್ನಾಗಿರುತ್ತಿತ್ತು. ಆದರೆ, ಕಾಲ ಕ್ರಮೇಣ ಎಲ್ಲವೂ ಬದಲಾಗಬೇಕು ಎಂಬ ಮಾತಿನಂತೆ ಮೊಬೈಲ್​ ಯುಗ ಇಂದು 6 ಇಂಚು ಉದ್ದದ ಸ್ಮಾರ್ಟ್​ಫೋನ್ ಎಂಬ ಆಧುನಿಕ ತಂತ್ರಜ್ಞಾನಕ್ಕೆ ಬಂದು ನಿಂತಿದೆ. ಇಂತಹ ಫೋನ್​ಗಳನ್ನು ಉಪಯೋಗಿಸುವವರ ಸಂಖ್ಯೆ ಎಷ್ಟು ಹೆಚ್ಚಿದೆಯೋ ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಸಮಸ್ಯೆ (Battery Drain) ಎದುರಿಸುತ್ತಿರುವವರ ಸಂಖ್ಯೆಯೂ ಇದೆ.

blank

ಇದನ್ನೂ ಓದಿ: ಡೆಂಗ್ಯೂ ಸೋಲಿಸಲು ಹೆಜ್ಜೆಗಳು, ಸ್ವಚ್ಛಗೊಳಿಸಿ ಮುಚ್ಚಿಡಿ ಘೋಷ ವಾಕ್ಯದೊಂದಿಗೆ ಮಾರಕ ಕಾಯಿಲೆ ವಿರುದ್ಧ ಜಾಗೃತಿ

ಆರಂಭದಲ್ಲಿ ಬ್ಯಾಟರಿ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಚೆನ್ನಾಗಿ ನೋಡಿ, ಆನಂತರ ಖರೀದಿಸುವ ಜನಸಾಮಾನ್ಯರು, ಎಷ್ಟೇ ಬಾರಿ ಫುಲ್ ಚಾರ್ಚ್​ ಮಾಡಿದರು, ದಿನ ಮುಗಿಯುವುದರೊಳಗೆ ಮೊಬೈಲ್​ನಲ್ಲಿ ಚಾರ್ಚ್​ ಖಾಲಿಯಾಗಿದೆ ಎಂದು ತೀವ್ರ ಬೇಸರಕ್ಕೆ ಒಳಗಾಗುತ್ತಾರೆ. ಇದರಿಂದ ಸಿಟ್ಟಾಗಿ, ಸ್ಮಾರ್ಟ್​ಫೋನ್ ಕಂಪನಿಗೂ ಹಿಗ್ಗಾಮುಗ್ಗಾ ಬೈಗುಳವನ್ನಿಡುತ್ತಾರೆ. ಪದೇ ಪದೇ ಚಾರ್ಚ್​ ಮಾಡುವಂತ ಪರಿಸ್ಥಿತಿ ನಿಮ್ಮ ಫೋನ್​ನಲ್ಲಿ ಕಾಡುತ್ತಿದ್ದರೆ, ಈ ಕೂಡಲೇ ನೀವು ಈ ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡುವ ಮೂಲಕ ಬ್ಯಾಟರಿ ಆರೋಗ್ಯವನ್ನು ಕಾಪಾಡಬಹುದು. ಹೇಗೆ ಅಂತೀರಾ? ಹೀಗಿದೆ ನೋಡಿ ಉಪಯುಕ್ತ ಮಾಹಿತಿ.

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

ಬ್ಯಾಟರಿ ಸಮಸ್ಯೆಗೆ ಮೂಲ ಕಾರಣಗಳು

ಸ್ಮಾರ್ಟ್​ಫೋನ್​ ಖರೀದಿಸಿದ ಬಳಿಕ ಅದರಲ್ಲಿನ ಹಲವು ಫೀಚರ್​ಗಳನ್ನು ನಾವು ಬದಲಿಸುತ್ತಲೇ ಇರುತ್ತವೆ. ಇದರೊಟ್ಟಿಗೆ ಬ್ಯಾಕ್​ಗ್ರೌಂಡ್​ನಲ್ಲಿ ಕೆಲವು ಆ್ಯಪ್​ಗಳನ್ನು ರನ್ನಿಂಗ್​ನಲ್ಲೇ ಇಟ್ಟಿರುತ್ತೇವೆ. ಇದು ಸಹ ಬ್ಯಾಟರಿ ಡೌನ್​ಗೆ ಒಂದು ಮೂಲ ಕಾರಣ. ಮೊಬೈಲ್​ನಲ್ಲಿ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕು ಎಂದಾದರೆ, ಮೊದಲು ಕೆಳಗೆ ತಿಳಿಸಿರುವ ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡಿಕೊಳ್ಳಿ. ಈ ಮುಖೇನ ಮೊಬೈಲ್ ಬದಲಿಸುವುದು ಅಥವಾ ಹೊಸ ಬ್ಯಾಟರಿ ಹಾಕಿಸುವುದು ತಪ್ಪುತ್ತದೆ.

ಇದನ್ನೂ ಓದಿ: ಟ್ರಂಪ್ ಭೇಟಿ ವೇಳೆ ಹೆಣ್ಣುಮಕ್ಕಳ ವಿಭಿನ್ನ ನೃತ್ಯ​!? ವೈರಲ್ ವಿಡಿಯೋ ಕಂಡ ನೆಟ್ಟಿಗರು ಅಚ್ಚರಿ | Trump Visit

ಯಾವ ಸೆಟ್ಟಿಂಗ್ಸ್​?

ಬ್ಯಾಟರಿ ಪರ್ಸಂಟೆಂಜ್​ ಕುಸಿತಕ್ಕೆ ಬ್ರೈಟ್ನೆಸ್​ ಕಾರಣ. ನೀವು ಎಷ್ಟು ಹೆಚ್ಚು ಬೆಳಕು ಜಾಸ್ತಿ ಇಟ್ಟಿರುತ್ತೀರೋ, ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಕಡಿಮೆಯಾಗುತ್ತಿರುತ್ತದೆ. ಕೆಲವರು ಬೆಳಗಿನ ಸಮಯದಲ್ಲಿ ಕಡಿಮೆ ಇಟ್ಟಿರುತ್ತಾರೆ. ಇನ್ನೂ ಕೆಲವರು ರಾತ್ರಿ ಆಗುತ್ತಿದ್ದಂತೆ ಬ್ರೈಟ್ನೆಸ್​ ಜಾಸ್ತಿ ಮಾಡಿಕೊಳ್ಳುತ್ತಾರೆ. ಇದು ಬ್ಯಾಟರಿ ಬಾಳಿಕೆಗೆ ಕತ್ತರಿ ಹಾಕುತ್ತದೆ. ಇದನ್ನು ತಡೆಯಲು ಸೆಟ್ಟಿಂಗ್ಸ್​ನಲ್ಲಿ ಆಟೋಮೆಟಿಕ್ ಬ್ರೈಟ್ನೆಸ್​ ಅನ್ನು ಆಯ್ಕೆ ಮಾಡಿಕೊಳ್ಳಿ. ಇದು ಬೆಳಕಿನ ಅಗತ್ಯತೆ ನೋಡಿಕೊಂಡು ಬ್ರೈಟ್ನೆಸ್​ ಒದಗಿಸುತ್ತದೆ. ಈ ಸೆಟ್ಟಿಂಗ್​ ಆಯ್ಕೆ ಮಾಡಿಕೊಳ್ಳುವುದರಿಂದ ಬ್ಯಾಟರಿ ಹೆಚ್ಚು ಬಳಕೆಯಾಗುವುದಿಲ್ಲ.

ಲೊಕೇಶನ್​ ಸರ್ವಿಸ್​ ಹೊಡೆತ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳಲ್ಲಿ ಲೊಕೇಶನ್ ಆನ್ ಆಗಿದ್ದರೆ ತಮ್ಮ ಕೆಲಸಗಳು ಸುಲಭ ಎಂಬುದು ಕೆಲವರ ಅನಿಸಿಕೆ. ಲೊಕೇಶನ್​ ಸೆಟ್ಟಿಂಗ್​ನಲ್ಲಿ ತಾವು ಹೋಗಬೇಕಾದ ಸ್ಥಳವನ್ನು ನಮೂದಿಸಿ, ಬ್ಯಾಕ್​ಡ್ರಾಪ್​ನಲ್ಲಿ ಇಟ್ಟಿರುತ್ತಾರೆ. ಇದರಿಂದ ಬ್ಯಾಟರಿ ಲೈಫ್​ ಕ್ಷಿಣಿಸುತ್ತ ಹೋಗುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರು ನಿಮ್ಮ ಮೊಬೈನಲ್ಲಿರುವ ಲೊಕೇಶನ್​ ಸೇವೆಗಳ ಸೆಟ್ಟಿಂಗ್‌ ಅನ್ನು ಆಫ್​ ಮಾಡಿಕೊಳ್ಳಿ. ಅನಗತ್ಯ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುವುದರಿಂದ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ಇದಲ್ಲದೆ, ನಿಮ್ಮ ವೈಯಕ್ತಿಕ ಡೇಟಾ ಕೂಡ ಹ್ಯಾಕ್ ಆಗುವ ಅಪಾಯವಿರುತ್ತದೆ. ನ್ಯಾವಿಗೇಷನ್ ಮತ್ತು ಹವಾಮಾನ ವರದಿಗಳ ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳನ್ನು ಅಗತ್ಯವಿದ್ದಾಗ ಆನ್ ಮಾಡಿಕೊಳ್ಳುವುದರಿಂದ ಬ್ಯಾಟರಿ ಆರೋಗ್ಯ ದೀರ್ಘ ಕಾಲ ಬರುವಂತೆ ನೋಡಿಕೊಳ್ಳಬಹುದು,(ಏಜೆನ್ಸೀಸ್).

ಕೊಹ್ಲಿ ನೋಡಲು ಕಾಯ್ತಿರುವ ಆರ್​ಸಿಬಿ ಫ್ಯಾನ್ಸ್​ಗೆ ವರುಣನ ಆತಂಕ! ಬೆಂಗಳೂರಿನಲ್ಲಿ ಬಿರುಸಿನ ಮಳೆ ಸಾಧ್ಯತೆ | Virat Kohli

Share This Article
blank

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

blank