

ವಾರಣಾಸಿ: ಇತ್ತೀಚಿನ ದಿನಗಳಲ್ಲಿ ಫುಡ್ ವ್ಲಾಗರ್ಗಳು (Food Vloggers) ಹೆಚ್ಚಾಗಿದ್ದು, ಪ್ರತಿನಿತ್ಯ ವಿವಿಧ ಆಹಾರ ಹಾಗೂ ಕಂಟೆಂಟ್ಗಳ ಮೂಲಕ ಜನರಿಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಆದರೆ, ಕೆಲವೊಮ್ಮೆ ಇವರ ಕೆಂಟೆಂಟ್ಗಳಿಗೆ ಟೀಕೆಗಳು ವ್ಯಕ್ತವಾಗುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯ ಘಾಟ್ನಲ್ಲಿ ಕಂಟೆಂಟ್ ಕ್ರಿಯೇಟರ್ಗಳಾದ ಅಂಕಿತ್ ಕುಮಾರ್ ಹಾಗೂ ಕೈಸಾ ಓಲ್ಜಕ್ಕಾ ಎಂಬುವವರು ಫುಡ್ ವ್ಲಾಗರ್ಗಳ (Food Vloggers) ಕುರಿತಾದ ವಿಡಿಯೋ ಒಂದು ಹಂಚಿಕೊಂಡಿದ್ದು, ಈ ವಿಡಿಯೋ 50 ಮಿಲಿಯನ್ಗಿಂತಲೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಅಂಕಿತ್ ಕುಮಾರ್ ಯುವತಿಯ ಬಳಿ ಹೋಗಿ ಬನಾರಸ್ ಘಾಟ್ನಲ್ಲಿ ವಿದೇಶಿಯೊಬ್ಬರು ಚಹಾವನ್ನು ಮಾರುತ್ತಿದ್ದಾರೆ ಎಂದು ಹೇಳುತ್ತಾರೆ. ಬಳಿಕ ಅವರು ಮಾಡುವ ಚಹಾ ಹೇಗಿದೆ ನೋಡೋಣ ಬನ್ನಿ ಎಂದು ಹೇಳುತ್ತಾರೆ. ಬಳಿಕ ಒಂದು ಕಪ್ ಚಹಾ ಕೊಡುವಂತೆ ಹೇಳಿ 10 ರೂಪಾಯಿ ಕೊಡುತ್ತಾರೆ.
ಅಂಕಿತ್ ಕುಮಾರ್ರಿಂದ ಹಣ ಪಡೆದ ಬಳಿಕ ಆತ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಯುವತಿ ನೀವು ಫುಡ್ ವ್ಲಾಗರ್ಹಾ (Food Vloggers) ಎಂದು ಕೇಳುತ್ತಾಳೆ. ಅದಕ್ಕೆ ಯುವಕ ಹೌದು ಎಂದು ಹೇಳುತ್ತಾನೆ. ಬಳಿಕ ಆಕೆ 10 ರೂಪಾಯಿಯನ್ನು ವಾಪಸ್ ಕೊಟ್ಟು ಚಹಾ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಯಾಕೆ ಎಂದು ಪ್ರಶ್ನಿಸಿದಾಗ ನೀವು ಫುಡ್ ವ್ಲಾಗರ್ಗಳು (Food Vloggers) ಕಂಟೆಂಟ್ ಹೆಸರಿನಲ್ಲಿ ನಮ್ಮನ್ನು ಟೀಕಿಸಿ ಹಣ ಗಳಿಸುತ್ತಿದ್ದೀರಾ ಎಂದು ಯುವತಿ ಕಾರಣವನ್ನು ನೀಡಿದ್ದಾಳೆ.
ವಿದೇಶಿ ಇಂಡಿಯನ್ ಪೇಜ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 50 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವರು ಇವರ ಕಂಟೆಂಟ್ಅನ್ನು ಮೆಚ್ಚಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಕೆಲವರು ಅದನ್ನು ಟೀಕಿಸಿ ಕಿಡಿಕಾರಿದ್ದಾರೆ.