ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿದ್ದ ಶಾಸಕರು ಕ್ಷಮೆ ಕೇಳಿಲ್ಲ: ಹೇಳಿಕೆಯನ್ನು ಬದಲಾಯಿಸಿದ ಪರಮೇಶ್ವರ

g parameshwara
Published on

ತುಮಕೂರು: ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಸಿಎಂಗೆ ಪತ್ರ ಬರೆದಿದ್ದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಕ್ಷೇಮೆ ಕೇಳಿ ಎಂದು ಯಾರೂ ಹೇಳಿಲ್ಲ, ಯಾರೂ ಕ್ಷಮೆ ಕೇಳಬೇಕಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಷಯ ಚರ್ಚಿಸಲು ಅವರು ಸಭೆಗೆ ಒತ್ತಾಯಿಸಿದ್ದು, ಬೇರೆ ಉದ್ದೇಶಕ್ಕೆ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಯಾರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಈ ಹಿಂದೆ ಶಾಸಕರು ಕ್ಷಮೆ ಕೇಳಿದ್ದಾರೆ ಎಂದು ನೀಡಿದ್ದ ಹೇಳಿಕೆಯನ್ನು ಪರಮೇಶ್ವರ್ ಬದಲಾಯಿಸಿದರು.

ಸಿಎಲ್‌ಪಿ ಸಭೆ ಕರೆಯುವಂತೆ ಶಾಸಕರುಗಳು ಮನವಿ ಮಾಡಿದ್ದರು. ಅದರಂತೆ ಸಭೆ ಕರೆದು ಚರ್ಚೆ ಮಾಡಲಾಗಿದೆ ಅಷ್ಟೆ. ಈ ಬಗ್ಗೆ ವಿನಾ ಕಾರಣ ಬೇರೇಬೇರೇ ಅರ್ಥ ಕಲ್ಪಿಸುವುದು ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net