ಮಾರಮ್ಮನ ಜಾತ್ರೆಗೆ ಬಂದವರು ಮಸಣಕ್ಕೆ: ಮಧುಗಿರಿಯಲ್ಲಿ ರಸ್ತೆ ಅಪಘಾತಕ್ಕೆ ಮೂವರು ಬಲಿ

26_Web
Published on

ತುಮಕೂರು: ಸ್ವಗ್ರಾಮದ ಮಾರಮ್ಮನ ಹಬ್ಬಕ್ಕೆ ಬೆಂಗಳೂರಿನಿಂದ ಆಗಮಿಸುತ್ತಿದ್ದ ನಾಲ್ವರಿದ್ದ ಕಾರು ಹಾಗೂ ಲಾರಿ ಮುಖಾಮುಖಿಯಾಗಿ ಮೂವರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧುಗಿರಿ ತಾಲೂಕು ಮಿಡಿಗೇಶಿ ಸಮೀಪ ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು ಪಾವಗಡ ತಾಲೂಕಿನ ಗುಜ್ಜನಡು ಗ್ರಾಮದ ಹೇಮಂತ್(25), ಸಿ.ಆರ್.ಪಾಳ್ಯದ ಆಕಾಶ್(26), ಶಿರಾ ತಾಲೂಕು ಕಂಡೇನಗಳ್ಳಿ ಕಾರ್ತಿಕ್(25) ಮೃತರು. ಉಜ್ವಲï ಎಂಬುವವರು ಗಾಯಗೊಂಡಿದ್ದು ತುಮಕೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವ ಯುವಕರೆಲ್ಲರೂ ಶುಕ್ರವಾರ ಗುಜ್ಜನಡು ಗ್ರಾಮದಲ್ಲಿ ನಡೆಯುತ್ತಿದ್ದ ಮಾರಮ್ಮನ ಹಬ್ಬಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಮಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net