

ತುಮಕೂರು: ಜಿಲ್ಲೆಯ ಶಿರಾ ತಾಲೂಕು ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2025-&26ನೇ ಸಾಲಿನಲ್ಲಿ ಶಿಕ್ಷಕರ(ಡಿ.ಇಎಲ್.ಇಡಿ) ತರಬೇತಿ ನೀಡಲು ದಾಖಲಾತಿ ಪ್ರಾರಂಭವಾಗಿದ್ದು, ದ್ವೀತಿಯ ಪಿಯು ಉತ್ತೀರ್ಣ ಮತ್ತು ಪದವಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.
ಬೆಂಗಳೂರು ವಿಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಯುವ ಸಂಸ್ಥೆ ಇದಾಗಿದ್ದು, ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಪರಿಶಿಫ್ಟಿ ಜಾತಿ/ ಪರಿಶಿಫ್ಟಿ ಪಂಗಡ ವಿದ್ಯಾರ್ಥಿಗಳು ಶೇ. 45 ಹಾಗೂ ಸಾಮಾನ್ಯ ವಿದ್ಯಾರ್ಥಿಗಳು ಶೇ.50ರಷ್ಟು ಅಂಕ ಗಳಿಸಿರಬೇಕು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶವಿದ್ದು, ಸಾಮಾನ್ಯ ವಿದ್ಯಾರ್ಥಿಗಳಿಗೆ 3065 ರೂ.ಗಳ ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಶಿಕ್ಷಕರ ತರಬೇತಿಯಲ್ಲದೆ ಈ ಸಂಸ್ಥೆಯಲ್ಲಿ ಗಣಕಯಂತ್ರ ತರಬೇತಿ, ಸ್ಮಾರ್ಟ್ ಕ್ಲಾಸ್ ಬೋಧನೆ, ಶಿಕ್ಷಕರಾಗ ಬಯಸುವವರಿಗೆ ಟಿಇಟಿ ತರಬೇತಿ ನೀಡಲಾಗುವುದು. ನುರಿತ ಅನುಭವವುಳ್ಳ ಉಪನ್ಯಾಸಕರುಗಳಿಂದ ತರಬೇತಿ ಮತ್ತು ಬೋಧನೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಮೊ. 9741069414, 9741507942, 9980870260, 7760783653, 9880331083, 9480250487 ಸಂಪರ್ಕಿಸಿ.