ಗ್ರಾಹಕರ ಸಂವಾದ ಸಭೆ

BESCOM
Published on

ತುಮಕೂರು: ಬೆಸ್ಕಾಂ ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಜುಲೈ 19ರಂದು ಮಧ್ಯಾಹ್ನ 3 ರಿಂದ 5.30ಕ್ಕೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.

ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಭೀಮಸಂದ್ರ ನಗರ ಹಾಗೂ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್​, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕರಿಗಾಗಿ ಹೊರಪೇಟೆಯ ಬೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗ್ರಾಹಕ ಸಂವಾದ ಸಭೆ ನಡೆಯಲಿದ್ದು,

ಸಂಬಂಧಿಸಿದ ವಿದ್ಯುತ್​ ಗ್ರಾಹಕರು ಸಭೆಗೆ ಹಾಜರಾಗಿ ಕುಂದು, ಕೊರತೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net