

ವಿಟ್ಲ: ನಮ್ಮ ಪೂರ್ವಜರ ಆಚರಣೆ, ಆಹಾರ ಪದ್ಧತಿಗಳಲ್ಲಿ ಜೀವ ಮತ್ತು ಜೀವನದ ಕಾಳಜಿ ತುಂಬಿತ್ತು. ಪ್ರಕೃತಿಯ ಋತುಮಾನಕ್ಕೆ ಅನುಗುಣವಾಗಿ ದೇಹಾರೋಗ್ಯ ರಕ್ಷಿಸಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಆಟಿ ತಿಂಗಳ ಆಚರಣೆಯಲ್ಲಿಯೂ ಆರ್ಥಿಕ ಅಸಹಾಯಕತೆಯ ನಡುವೆ ಆರೋಗ್ಯ, ಮನೋರಂಜನೆಯೊಂದಿಗೆ ಆನಂದವಾಗಿ ಬದುಕುತ್ತಿದ್ದರು ಎಂದು ಬಂಟ್ವಾಳ ಸಂಚಯನ ಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ.ತುಕಾರಾಮ ಪೂಜಾರಿ ಹೇಳಿದರು.
ವಿಟ್ಲ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ವಿಟ್ಲ ಬಿಲ್ಲವ ಸಂಘ, ಮಹಿಳಾ ಬಿಲ್ಲವ ಘಟಕ, ವಿಟ್ಲ ಯುವ ವಾಹಿನಿ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಆಟಿ ತಿಂಗೊಲ್ದ ಪೊಲಬು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿದರು. ವಿಟ್ಲ ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಬಿಲ್ಲವ ಸಂಘ ಅಧ್ಯಕ್ಷ ಮಾಧವ ಪೂಜಾರಿ ಪಟ್ಲ, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ವಿಟ್ಲ ಯುವವಾಹಿನಿ ಘಟಕ ಅಧ್ಯಕ್ಷ ರಾಜೇಶ್ ವಿಟ್ಲ, ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಬಿಲ್ಲವ ಮಹಿಳಾ ಘಟಕದ ಗೌರವಾಧ್ಯಕ್ಷೆ ಪ್ರೇಮಲತಾ ಸೋಮಶೇಖರ್ ಉಕ್ಕುಡ, ಯುವವಾಹಿನಿ ಘಟಕ ಕಾರ್ಯದರ್ಶಿ ಶೋಭಾ ವಿಶ್ವನಾಥ್ ಉಪಸ್ಥಿತರಿದ್ದರು.
ತುಳು ಪಾಡ್ದನ, ಆಟಿ ತಿನಿಸುಗಳ ಪ್ರದರ್ಶನ ನಡೆಯಿತು. ಕವಿತಾ ಪರಮೇಶ್ವರ್ ಸ್ವಾಗತಿಸಿ. ವಿಟ್ಲ ಬಿಲ್ಲವ ಮಹಿಳಾ ಘಟಕದ ಕಾರ್ಯದರ್ಶಿ ಭಾರತಿ ಪ್ರಕಾಶ್ ವಂದಿಸಿ. ಶಿಕ್ಷಕಿ ಧನಲಕ್ಷ್ಮಿ ರಾಜೇಶ್ ನಿರೂಪಿಸಿದರು.