ಭಾಷಾ ವೈವಿಧ್ಯದಲ್ಲಿದೆ ಸೊಗಸು : ಡಾ.ಪ್ರತಾಪಲಿಂಗಯ್ಯ ಅಭಿಪ್ರಾಯ

New Project (3)
Published on

ಉಳ್ಳಾಲ: ಭಾರತದಲ್ಲಿ ವಿವಿಧ ಆಚರಣೆ, ಸಂಸ್ಕೃತಿ,ಭಾಷೆಗಳನ್ನು ಮಾತನಾಡುವ ಜನರಿದ್ದಾರೆ, ಈ ಭಾಷಾ ವೈವಿಧ್ಯತೆಯಲ್ಲಿ ಭಾರತೀಯತೆಯ ಸೊಗಸು ಇದೆ ಎಂದು ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಾಧಿಕಾರಿ ಡಾ.ಪ್ರತಾಪಲಿಂಗಯ್ಯ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿವಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಭಾರತೀಯ ಭಾಷಾ ದಿವಸ ಮತ್ತು ತುಳು ಪರ್ಬ ಆಚರಣೆ ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ವಿವಿ ನಿಕಟಪೂರ್ವ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪದಲ್ಲಿ ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಥಿಕ್ಸ್‌ನ ನಿರ್ದೇಶಕಿ ಪ್ರೊ.ವೀಣಾ ವಾಸ್ವಾನಿ, ಕೆ.ಎಸ್.ಮೆಡಿಕಲ್ ಅಕಾಡೆಮಿ ಪ್ರಭಾರ ಡೀನ್ ಪ್ರೊ.ಜಯಪ್ರಕಾಶ ಶೆಟ್ಟಿ, ಯೆನೆಪೋಯ ವಿವಿ ಮಾಜಿ ಕುಲಸಚಿವ ಪ್ರೊ.ರವಿ ವಾಸ್ವಾನಿ, ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಶಶಿಕುಮಾರ್ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತರಿದ್ದರು.

ಡಾ.ಸಾಯಿಗೀತಾ ಸ್ವಾಗತಿಸಿದರು. ಅನ್ಯಾ ಶಂಕರ್ ರೈ ವರದಿ ವಾಚಿಸಿದರು. ಡಾ.ವರ್ಷಾ ಶೆಟ್ಟಿ ವಂದಿಸಿದರು. ಸುವೀಕ್ಷಾ, ಚಿರಶ್ರೀ ಹಾಗೂ ದೀವಿತ್ ಪೆರಾಡಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net