ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 48.75 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ

mng--7 Dec Gold
Published on

ಮಂಗಳೂರು: ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 48.75 ಲ.ರೂ. ಮೌಲ್ಯದ ಚಿನ್ನ ಹಾಗೂ 1.41 ಲ.ರೂ. ಮೌಲ್ಯದ ಇ-ಸಿಗರೇಟ್‌ನ ನಿಕೊಟಿನ್ ಲಿಕ್ವಿಡ್‌ನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯವರು ಡಿ.1 ಮತ್ತು ಡಿ.2ರಂದು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ಇಬ್ಬರು ನಿವಾಸಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಅಂಡಾಕಾರದ ಕವರ್‌ನಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 625 ಗ್ರಾಂ ತೂಕದ 48,75,000 ರೂ. ಮೌಲ್ಯದ ಚಿನ್ನವನ್ನು ದೇಹದ ಭಾಗಗಳಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅಲ್ಲದೆ ಬ್ಯಾಗ್‌ಗಲ್ಲಿ ಇ-ಸಿಗರೇಟ್‌ಗೆ ಬಳಕೆ ಮಾಡುವ 1,41,134 ರೂ. ಮೌಲ್ಯದ ನಿಕೋಟಿನ್ ಲಿಕ್ವಿಡ್‌ನ 147 ರಿಫಿಲ್‌ಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net