Funeral ಪಂಚ ಭೂತಗಳಲ್ಲಿ ಲೀನವಾದ ವೃಕ್ಷ ಮಾತೆ ತುಳಸಿ ಗೌಡ

Funeral
Published on

ಅಂಕೋಲಾ Funeral : ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರು ಪಂಚ ಭೂತಗಳಲ್ಲಿ ಲೀನವಾಗಿದ್ದಾರೆ. ಸೋಮವಾರ ಸಾಯಂಕಾಲ ಅವರು ನಿಧನರಾಗಿದ್ದರು. ಅವರ ಸ್ವಗ್ರಾಮ ಅಂಕೊಲಾ ಹೊನ್ನಳ್ಳಿಯ ಅವರದೇ ಜಮೀನಿನಲ್ಲಿ ಮಂಗಳವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ಪುತ್ರ ಸುಬ್ರಾಯ ಗೌಡ ನೆರವೇರಿಸಿದರು.

Funeral

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಶಾಸಕ ಸತೀಶ ಸೈಲ್ ಹಾಗೂ ಹಲವು ಗಣ್ಯರು ಸರ್ಕಾರದ ಪರವಾಗಿ ಪುಷ್ಪ ಮಾಲೆ ಸಮರ್ಪಿಸಿ, ವಂದನೆ ಸಲ್ಲಿಸಿದರು. ಸಶಸ್ತ್ರ  ತುಕಡಿಗಳಿಂದ ಮೂರು ಬಾರಿ ಗುಂಡು ಹಾರಿಸಿ, ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಎಸಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಅನಂತ ಶಂಕರ, ಡಿವೈಎಸ್‌ಪಿ ಗಿರೀಶ ಎಸ್.ವಿ., ಮಾಜಿ ಶಾಸಕ ಕೆ.ಎಚ್.ಗೌಡ, ಹಾಲಕ್ಕಿ ಸಮಾಜದ ಪ್ರಮುಖರಾದ ಹನುಮಂತ ಗೌಡ, ಪುರುಷೋತ್ತಮ ಗೌಡ ಸೇರಿ 500 ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net