ತಿರುಪತಿಯಲ್ಲಿ ದಾಖಲೆ ನಿರ್ಮಿಸಿದ ವೈಕುಂಠ ಏಕಾದಶಿಯ ಕಾಣಿಕೆ!

TIRU NEW
Published on

ಹೈದರಾಬಾದ್​​: ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ಹುಂಡಿಗೆ ವೈಕುಂಠ ಏಕಾದಶಿ ದಿನದಂದು ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ.

ವೈಕುಂಠ ಏಕಾದಶಿಯ ದಿನ ವ್ರತ ಆಚರಿಸಿ ಗೋವಿಂದನ ದರ್ಶನ ಪಡೆದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ತಲತಲಾಂತರಗಳಿಂದಲೂ ಇದೆ. ಹೀಗಾಗಿ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದು, ಒಂದೇ ದಿನದಲ್ಲಿ ತಿಮ್ಮಪ್ಪನ ಹುಂಡಿಗೆ 7.68 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಈವರೆಗಿನ ಗರಿಷ್ಠ ಮೊತ್ತ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್​​​ನಲ್ಲಿ 6.31 ಕೋಟಿ ಸಂಗ್ರಹವಾಗಿತ್ತು, ಅದು ಇಲ್ಲಿಯವರೆಗೂ ದಾಖಲೆ ಎನಿಸಿತ್ತು. ಈ ಬಾರಿ ವೈಕುಂಠ ಏಕಾದಶಿಗೆ ಆ ರೆಕಾರ್ಡ್​​​ ಬ್ರೇಕ್​​ ಆಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net