

ದೆಹಲಿ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಭಾರತದ ಕ್ರಿಕೆಟಿಗ ರಿಷಬ್ ಪಂತ್(Rishabh Pant) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ಡೆಹ್ರಾಡೂನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಡಿ.30ರ ಬೆಳಗ್ಗೆ BMW ಕಾರಿನಲ್ಲಿ ಭಾರತದ ಸ್ಟಾರ್ ವಿಕೆಟ್ಕೀಪರ್(wicketkeeper) ಮನೆಗೆ ತೆರಳುವಾಗ ಮಾರ್ಗಮಧ್ಯೆ ಉತ್ತರಾಖಂಡ್‌ನ ರೂರ್ಕಿ ಬಳಿ ಡಿವೈಡರ್‌ಗೆ ಕಾರು ಡಿಕ್ಕಿ(accident) ಹೊಡೆದಿತ್ತು. ಅಪಘಾತಕ್ಕೀಡಾದ ಕ್ಷಣಾರ್ಧದಲ್ಲೇ ಕಾರು ಹೊತ್ತಿ ಉರಿದಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರಿಷಬ್ ಪಂತ್, ಗಂಭೀರ ಗಾಯಗೊಂಡಿದ್ದರು. ತಲೆ, ಮಂಡಿ, ಬೆನ್ನು, ಕಾಲಿಗೆ ಗಾಯವಾಗಿತ್ತು.
ದೆ. ಮೊಣಕಾಲು ಮತ್ತು ಬಲಗಾಲಿನ ಮಂಡಿಯ ಲಿಗಮೆಂಟ್(ಅಸ್ಥಿರಜ್ಜು) ಚಿಕಿತ್ಸೆಗಾಗಿ ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಸ್ಥಳಾಂತರಿಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಿದ್ಧವಾಗಿದೆ.(ಏಜೆನ್ಸೀಸ್)