ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡರೆ, ಇನ್ನು ಕೆಲವರು ವ್ಯಾಯಾಮಗಳಲ್ಲಿ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನೀರು ಕುಡಿಯುವುದು, ಹಸಿ ತರಕಾರಿಗಳನ್ನು ಸೇವಿಸುವುದು ಹೀಗೆ ಉತ್ತಮ ಜೀವನಶೈಲಿಗಾಗಿ ಮಾಡುವ ನಾನಾ ಪ್ರಯತ್ನಗಳನ್ನು ನಾವೆಲ್ಲಾ ನೋಡಿದ್ದೇವೆ.
ಇದನ್ನೂ ಓದಿ: ರಾಜ್ಯಕ್ಕೆ ಮಾಡು-ಮಡಿ ಸವಾಲು: ಇಂದು ಬರೋಡ ಎದುರಾಳಿ, ನಾಕೌಟ್ ರೇಸ್‌ನಲ್ಲಿ ಉಳಿಯಲು ಜಯ ಅನಿವಾರ್ಯ
ಬೆಳಗ್ಗೆ ಬೇಗ ಎದ್ದೇಳಬೇಕು, ಏಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದೇ ರೀತಿ ಬೆಳಗ್ಗೆ ಸಮಯ ಒಂದಷ್ಟು ಆಹಾರಗಳನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತವಾಗಿರುತ್ತದೆ ಎಂದು ಹಲವರು ಅಭಿಪ್ರಾಯಿಸುತ್ತಾರೆ. ಅದಕ್ಕೆ ಒಳ್ಳೆಯ ಆಹಾರಗಳ ಮೊರೆ ಹೋಗುವುದು ಒಳಿತು. ಅಂತಹ ಆಹಾರಗಳ ಪೈಕಿ ವಾಲ್ನಟ್ಸ್ ಉತ್ತಮ. ಇದರ ಸೇವನೆ ಬೆಳಗ್ಗೆ ಎಷ್ಟು ಬೆಸ್ಟ್? ಪ್ರಯೋಜನಗಳೇನು ಎಂಬುದರ ಮಾಹಿತಿ ಹೀಗಿದೆ ಗಮನಿಸಿ.
ಹೃದಯದ ಆರೋಗ್ಯ
ಬೆಳಗ್ಗಿನ ಸಮಯದಲ್ಲಿ ವಾಲ್ನಟ್ಸ್ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಂತಹ ಕೊಬ್ಬಿನಾಂಶಗಳು ತುಂಬಿದ್ದು, ಇದು ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಅಧಿಕವಾಗಿ ಸೇವಿಸುವುದು ಬೇಡ!
ಮಾನಸಿಕ ಆರೋಗ್ಯಕ್ಕೆ
ವಾಲ್ನಟ್ ಸೇವನೆಯಿಂದ ಒತ್ತಡ ಕಡಿಮೆಯಾಗುವುದರ ಜತೆಗೆ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ. ವಾಲ್‌ನಟ್ಸ್‌ನಲ್ಲಿ ಮೆಲಟೋನಿನ್, ಫೋಲೇಟ್, ವಿಟಮಿನ್ ಇ ಮತ್ತು ಪಾಲಿಫಿನಾಲ್‌ಗಳು ಸೇರಿದಂತೆ ನ್ಯೂರೋ-ಪೋಷಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ.
ಅಧಿಕ ತೂಕ
ವಾಲ್ನಟ್ಸ್ ದೇಹದ ಅಧಿಕ ತೂಕವನ್ನು ಕಡಿಮೆಗೊಳಿಸುವುದರ ಜತೆಗೆ ಸಮತೋಲನದಲ್ಲಿರಿಸುವಲ್ಲಿ ಹೆಚ್ಚು ಸಹಾಯಕಾರಿಯಾಗಿದೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವ್ಯಾಟ್ಸ್ಆ್ಯಪ್ ವೆಬ್ ಬಳಕೆದಾರರೇ ಎಚ್ಚರ! ಡೇಟಾ ಸೋರಿಕೆ ತಪ್ಪಿಸಲು ಈಗಲೇ ಈ ಫೀಚರ್ ಆನ್ ಮಾಡಿಕೊಳ್ಳಿ | Feature