ಫ್ರಾನ್ಸ್​ ಅಧ್ಯಕ್ಷರನ್ನು ರಸ್ತೆಯಲ್ಲಿ ತಡೆದ ಟ್ರಂಪ್​ ಬೆಂಗಾವಲು ಪಡೆ: ಬೀದಿಯಲ್ಲಿ ನಿಂತು ಮ್ಯಾಕ್ರನ್ ರಂಪಾಟ! | Macron

Untitled design - 2025-09-23T202048.664
Published on

Macron: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ತೆರಳುವ ವೇಳೆ ಅವರ ಬೆಂಗಾವಲು ಪಡೆ, ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕಾರು ತೆಡೆದಿದ್ದು, ಕೊಂಚ ಕಾಲ ರಸ್ತೆಯಲ್ಲಿ ಹೈಡ್ರಾಮ ನಡೆಯಿತು.

ಹೌದು, ಮ್ಯಾಕ್ರನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಭಾಷಣ ಮಾಡಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಸಾಮಾನ್ಯ ಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಪ್ಯಾಲೆಸ್ಟೈನ್ ರಾಜ್ಯವನ್ನು ಔಪಚಾರಿಕವಾಗಿ ಗುರುತಿಸುವುದಾಗಿ ಘೋಷಿಸಿದರು. ಬಳಿಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಹೊರ ಬಂದ ಫ್ರಾನ್ಸ್​ ಅಧ್ಯಕ್ಷರನ್ನು ಬೆಂಗಾವಲು ಪಡೆ ಟ್ರಂಪ್​ರ ಸನ್ನಿಹಿತ ಮಾರ್ಗವನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೊಲೀಸರು ಅವರನ್ನು ತಡೆದಿದ್ದಾರೆ.

ಕಾರಿನಿಂದ ಕೆಳಗಿಳಿದ ಎಮ್ಯಾನುಯೆಲ್ ಮ್ಯಾಕ್ರನ್, ಟ್ರಂಪ್​ಗೆ ಕರೆ ಮಾಡಿ ''ನಾನು ಬೀದಿಯಲ್ಲಿ ಕಾಯುತ್ತಿದ್ದೇನೆ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ಕಾರಿನಿಂದ ಕೆಳಗಿಳಿದ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಪೊಲೀಸರು ಹೇಳಿದ್ದು ಹೀಗೆ, '' “ಕ್ಷಮಿಸಿ, ಮಿಸ್ಟರ್ ಅಧ್ಯಕ್ಷರೇ, ಈಗ ಎಲ್ಲವೂ ನಿರ್ಬಂಧಿಸಲಾಗಿದೆ.” ಎಂದಿದ್ದಾರೆ.

ಬಳಿಕ ಟ್ರಂಪ್​ಗೆ ತಕ್ಷಣಕ್ಕೆ ಪೋನ್​ ಮಾಡಿದ ಮ್ಯಾಕ್ರನ್​, “ ನಾನು ಎಲ್ಲಿದ್ದೇನೆ ಎಂದು ಊಹಿಸಿ, ನಾನು ಬೀದಿಯಲ್ಲಿ ಕಾಯುತ್ತಿದ್ದೇನೆ ಏಕೆಂದರೆ ಎಲ್ಲವೂ ನಿಮಗಾಗಿ ನಿರ್ಬಂಧಿಸಲಾಗಿದೆ.” ಎಂದು ಹೇಳಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಅಮೆರಿಕ ಅಧ್ಯಕ್ಷರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಪ್ರಯಾಣಿಸಿದಾಗಲೆಲ್ಲಾ, ಭದ್ರತಾ ಹಿನ್ನೆಲೆ "ಫ್ರೀಜ್"(ನಿರ್ಬಂಧ) ಎಂದು ಕರೆಯಲ್ಪಡುವದನ್ನು ವಿಧಿಸುತ್ತವೆ. ಇದು ವಿಶ್ವಸಂಸ್ಥೆಯ ಸುತ್ತಲಿನ ಹಲವಾರು ಬ್ಲಾಕ್‌ಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net