ವಾಷಿಂಗ್ಟನ್ ಡಿಸಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ(ಜನವರಿ 20) ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದಾರೆ(Trump Oath Ceremony). ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಶ್ವದ ಅನೇಕರು ಅತಿಥಿಗಳಾಗಿ ಭಾಗವಹಿಸಿದ್ದರು. ಏತನ್ಮಧ್ಯೆ ಎಲಾನ್ ಮಸ್ಕ್ ಅವರ ಹ್ಯಾಂಡ್ ಗೆಸ್ಚರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ.
ಇದನ್ನು ಓದಿ: ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಡಿಶ್ಚಾರ್ಜ್; 5 ದಿನಗಳ ಬಳಿಕ ಮನೆಗೆ ಮರಳಿದ Saif
ಸಮಾರಂಭದಲ್ಲಿ ವೇದಿಕೆ ಆಗಮಿಸಿದ ಎಲಾನ್ ಮಸ್ಕ್ ಇದು ಸಾಮಾನ್ಯ ವಿಷಯವಲ್ಲ. ಇದು ದೊಡ್ಡ ವಿಷಯವಾಗಿದೆ, ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳುತ್ತಾರೆ. ಜತೆಗೆ ಮಸ್ಕ್ ತನ್ನ ಎದೆಯ ಎಡಭಾಗವನ್ನು ತನ್ನ ಬಲಗೈಯಿಂದ ಟ್ಯಾಪ್ ಮಾಡಿ ನಂತರ ತನ್ನ ಅಂಗೈಯಿಂದ ತನ್ನ ತೋಳನ್ನು ಚಾಚುತ್ತಾರೆ. ಸದ್ಯ ಈ ವಿಡಿಯೋ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಎಲಾನ್ ಮಸ್ಕ್ ಅವರ ಹ್ಯಾಂಡ್ ಗೆಸ್ಚರ್ ಅನ್ನು ಜಾಲತಾಣದಲ್ಲಿ ಸಾಕಷ್ಟು ಟೀಕಿಸಲಾಗುತ್ತಿದೆ. ಇದನ್ನು ‘ನಾಜಿ ಸೆಲ್ಯೂಟ್’ ಎಂದು ಕರೆಯಲಾಗುತ್ತಿದೆ. ಅವರನ್ನು ಹಿಟ್ಲರ್ ಮತ್ತು ನಾಜಿಗೆ ಹೋಲಿಸಲಾಗುತ್ತಿದೆ. ವಾಸ್ತವವಾಗಿ, ನಾಜಿ ಸೆಲ್ಯೂಟ್ ಅನ್ನು ಹಿಟ್ಲರ್ ಸೆಲ್ಯೂಟ್ ಎಂದೂ ಕರೆಯಲಾಗುತ್ತದೆ. ಈ ಸೂಚಕವನ್ನು ನಾಜಿ ಜರ್ಮನಿಯಲ್ಲಿ ಹಿಟ್ಲರ್ ಸ್ವತಃ ಶುಭಾಶಯವಾಗಿ ಬಳಸಿದರು. ಭುಜದಿಂದ ಬಲಗೈಗೆ ಗಾಳಿಯಲ್ಲಿ ಚಾಚಿದ ನೇರವಾದ ತೋಳಿನೊಂದಿಗೆ ಸೆಲ್ಯೂಟ್ ಅನ್ನು ನಡೆಸಲಾಗುತ್ತದೆ.
ಅಮೆರಿಕನ್ ಇತಿಹಾಸಕಾರರಾದ ರುತ್ ಬೆನ್-ಘಿಯಾಟ್, ಕ್ಲೇರ್ ಆಬಿನ್, ಎಲಾನ್ ಮಸ್ಕ್ ಅವರ ಈ ಗೆಸ್ಚರ್ ಅನ್ನು ನಾಜಿ ಸೆಲ್ಯೂಟ್ ಎಂದು ಕರೆದಿದ್ದಾರೆ. ಆದರೆ ಆಂಟಿ-ಡಿಫಾಮೇಶನ್ ಲೀಗ್ (ADL) ಈ ಗೆಸ್ಚರ್‌ನಲ್ಲಿ ಮಸ್ಕ್ ಅವರನ್ನು ಸಮರ್ಥಿಸಿಕೊಂಡಿದೆ.
DO NOT BELIEVE THE MEDIA
The media is misleading you. Elon Musk never did a Nazi salute. Watch the full video: He simply gestured and said, “Thank you, my heart goes out to you.” pic.twitter.com/e3vBaLoVqx
— DogeDesigner (@cb_doge) January 20, 2025
ಇನ್ನು ಕೆಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರಿಗೆ ಇಂತಹ ಉತ್ತಮ ತಂತ್ರಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
The salute hoax is just another part of the “dirty tricks campaign” pic.twitter.com/iqL15A8jBK
— The Rabbit Hole (@TheRabbitHole84) January 21, 2025
ನಾನು ಈ ಹಿಂದೆ ಹಲವು ಸಂದರ್ಭಗಳಲ್ಲಿ ಎಲಾನ್ ಮಸ್ಕ್ ಅವರನ್ನು ಟೀಕಿಸಿದ್ದೇನೆ. ಆದರೆ ಅವರ ಹಾವಭಾವವು ನಾಜಿ ಸೆಲ್ಯೂಟ್ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ ‘ನಾನು ಇನ್ನು ಮುಂದೆ ನಿಮ್ಮಲ್ಲಿ ಕೆಲವರನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೆಲವರು ಯಾವಾಗಲೂ ನಕಾರಾತ್ಮಕ ವಿಷಯಗಳನ್ನು ನೋಡುತ್ತಾರೆ ಎಂದಿದ್ದಾರೆ. ಇದರೊಂದಿಗೆ ಅಮೆರಿಕದ ಹಲವು ನಾಯಕರು ಎಲಾನ್ ಮಸ್ಕ್ ಅವರ ರೀತಿಯೆ ಸೆಲ್ಯೂಟ್ ಮಾಡಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದು, ಈ ರೀತಿ ಮಾಡುವುದು ನಾಜಿ ಸೆಲ್ಯೂಟ್ ಆಗಿದ್ದರೆ ಇವರೇನು ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. (ಏಜೆನ್ಸೀಸ್)
I can’t take some of you people seriously anymore. I swear, some of you are just looking for negativity in everything. 🤣 Elon Musk, who has Asperger’s and is on the autism spectrum, was simply excited and being goofy—yet some are claiming he did a Nazi salute. If that’s the… pic.twitter.com/S3z0svALgN
— DEL (@delinthecity_) January 20, 2025