ಟ್ರಂಪ್-ಮೋದಿ ಮತ್ತೆ ಮಾತುಕತೆ ಸುಳಿವು; ಟ್ರಂಪ್ ಮುಂದೆ ಶರಣಾಗತಿ ಭಾರತೀಯರಿಗೆ ಮಾಡಿದ ಅವಮಾನ; ಮಾಜಿ ಸಿಎಂ ಕೇಜ್ರಿವಾಲ್ ಕಿಡಿ| Aravind Kejriwal

Aravind Kejriwal
Published on

Aravind Kejriwal: ಭಾರತ ಅಮೆರಿಕಾ ಸ್ವಾಭಾವಿಕ ಪಾಲುದಾರರು, ಟ್ರಂಪ್ ಜೊತೆ ಮಾತುಕತೆಗೆ ಎದುರು ನೋಡ್ತಿದ್ದೇನೆ ಎಂದು ಪ್ರಧಾನಿ ಮೋದಿಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಪ್ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಟ್ರಂಪ್ ಮುಂದೆ ಶರಣಾಗತಿ ಭಾರತೀಯರಿಗೆ ಮಾಡಿದ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕೇಜ್ರಿವಾಲ್, ಟ್ರಂಪ್ ಅವರನ್ನು ಮೆಚ್ಚಿಸಲು ದೇಶಾದ್ಯಂತ ಹತ್ತಿ ರೈತರನ್ನು ಪಣಕ್ಕಿಡಲಾಗುತ್ತಿದೆ. ಎರಡೂ ದೇಶಗಳ ನಡುವೆ ಯಾವ ರೀತಿಯ ಮಾತುಕತೆ ನಡೆಯುತ್ತಿದೆ? ಕೇವಲ ಏಕಪಕ್ಷೀಯ ಮಾತುಕತೆ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ರೈತರು, ವ್ಯಾಪಾರಿಗಳು ಹಾಗೂ ಯುವಕರ ಜೀವನೋಪಾಯವನ್ನು ಪಣಕ್ಕಿಟ್ಟು, ಭಾರತೀಯ ಮಾರುಕಟ್ಟೆಯನ್ನು ಅಮೆರಿಕನ್ನರಿಗೆ ಸಂಪೂರ್ಣವಾಗಿ ತೆರೆಯಲಾಗುತ್ತಿದೆ. ಇಡೀ ಮಾರುಕಟ್ಟೆಯನ್ನು ಅಮೆರಿಕನ್ನರು ವಶಪಡಿಸಿಕೊಂಡರೆ ನಮ್ಮ ಜನರು ಎಲ್ಲಿಗೆ ಹೋಗುತ್ತಾರೆ? ಟ್ರಂಪ್ ಮುಂದೆ ಇಂತಹ ಶರಣಾಗತಿ ಭಾರತದ ಆರ್ಥಿಕತೆಗೆ ಮಾರಕವಾಗುವುದಲ್ಲದೆ, 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನವೂ ಆಗಿದೆ ಎಂದಿದ್ದಾರೆ.

ದೇಶದ ಗೌರವನ್ನು ದುರ್ಬಲಗೊಳಿಸಬೇಡಿ, ದೇಶದ ಗೌರವವನ್ನು ಕಾಪಾಡುತ್ತೀರಿ ಎಂದು ದೇಶವೇ ನಿರೀಕ್ಷಿಸುತ್ತದೆ ಎಂದು ಮಾಜಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ಮಂಗಳವಾರ ಅಮೆರಿಕಾ ಅಧ್ಯಕ್ಷ ಟ್ರಂಪ್ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸುವ ಮಾತುಕತೆಗಳನ್ನು ಮುಂದುವರೆಸುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು. ಯಶಸ್ವಿ ತೀರ್ಮಾನವನ್ನು ತಲುಪುವ ವಿಶ್ವಾಸವನ್ನು ವ್ಯಕ್ತಪಡಿಸಿ, ಮುಂಬರುವ ವಾರಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಟ್ರೂತ್​ನಲ್ಲಿ ಪೋಸ್ಟ್​ ಹಾಕಿದ್ದರು.

ಇಂದು (ಸೆ.10)  ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ "ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ದಾರಿ ಮಾಡಿಕೊಡುತ್ತವೆ ಎಂದು ನನಗೆ ವಿಶ್ವಾಸವಿದೆ. ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಎಕ್ಸ್​ನಲ್ಲಿ ಪೋಸ್ಸ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net