ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕುಸಿದು ಬಿದ್ದ ಸ್ವೀಡೆನ್ ಆರೋಗ್ಯ ಸಚಿವೆ| Sweden Health Minister

Swiden
Published on

Sweden Health Minister: ಸ್ವೀಡನ್​ನ ನೂತನ ಆರೋಗ್ಯ ಸಚಿವೆಯಾಗಿ ಎಲಿಸಬೆಟ್ ಲ್ಯಾನ್ ಅಧಿಕಾರ ವಹಿಸಕೊಂಡ ಕೆಲವೇ ಗಂಟೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ವೇದಿಕೆ ಮೇಲೆಯೇ ಕುಸಿದು ಬಿದ್ದಿರುವ ಘಟನೆ ಮಂಗಳವಾರ (ಸೆ. 09) ನಡೆದಿದೆ ಎಂದು ವರದಿಯಾಗಿದೆ.

ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಅವರ ಪಕ್ಕದಲ್ಲಿ 48 ವರ್ಷದ ಎಲಿಸಬೆಟ್ ಲ್ಯಾನ್ ನಿಂತು ಪತ್ರಕರ್ತರಿಂದ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ದೃಶ್ಯಾವಳಿಗಳಲ್ಲಿ, ಶ್ರೀಮತಿ ಲ್ಯಾನ್ ಮತ್ತೊಬ್ಬ ಅಧಿಕಾರಿಯ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾ ಇದ್ದಕ್ಕಿದ್ದಂತೆ ಮುಂದಕ್ಕೆ ಬಾಗಿ, ಡಯಾಸ್​ನಿಂದ ನೆಲಕ್ಕೆ ಬೀಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪಕ್ಷದ ನಾಯಕಿ ಎಬ್ಬಾ ಬುಷ್ ತಕ್ಷಣವ ಲ್ಯಾನ್ ಅವರ ಪಕ್ಕಕ್ಕೆ ಧಾವಿಸಿ ಅವರನ್ನು ಮೇಲಕ್ಕೆ ಎತ್ತುತ್ತಿದ್ದು, ಇತರ ಅಧಿಕಾರಿಗಳು ಮತ್ತು ಪತ್ರಕರ್ತರು ಸಹಾಯ ಮಾಡಲು ಯತ್ನಿಸಿದ್ದಾರೆ. ಲ್ಯಾನ್ ಕ್ಷಣಗಳ ಕಾಲ ಪ್ರಜ್ಞಾಹೀನರಾಗಿದ್ದು, ತಕ್ಷಣ ಪ್ರಾಥಮಿಕ ಚಿಕಿತ್ಸೆ ನಡೆದಿದ್ದು, ಮರಳಿ ಪತ್ರಿಕಾಗೋಷ್ಠಿಗೆ ಆಗಮಿಸಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾದಾಗ ಈ  ರೀತಿ ಆಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಬಳಿಕ ಕೇವಲ ಸುದ್ದಿಗೋಷ್ಠಿ ನಡೆಸಿ, ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.

ಸೋಮವಾರ (ಸೆ.08) ಮೂರು ವರ್ಷಗಳ ಕಾಲ ಅರೋಗ್ಯ ಸಚಿವೆಯಾಗಿದ್ದ ಅಕೋ ಅಂಕರ್​ಬರ್ಗ ಜೋಹಾನ್ಸನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಿನ್ನೆ, ಲ್ಯಾನ್ ಸಚಿವೆಯಾಗಿ ನೇಮಿಸಲಾಗಿತ್ತು. ಲ್ಯಾನ್ ಕ್ರಿಶ್ಚಿಯನ್ ಡೆಮೋಕ್ರಾಟ್‌ಗಳ ದೀರ್ಘಕಾಲದ ಸದಸ್ಯರಾಗಿದ್ದಾರೆ. ಅವರು ಈ ಹಿಂದೆ 2019 ರಿಂದ ಗೋಥೆನ್‌ಬರ್ಗ್‌ನಲ್ಲಿ ಪುರಸಭೆಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net