ರಾಷ್ಟ್ರೀಯ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಸೌಂದರ್ಯ ಕಾಲೇಜಿನ ಶಿವಾಜಿ ಪ್ರಥಮ

cross web
Published on

ಬೆಂಗಳೂರು: 58ನೇ ರಾಷ್ಟ್ರೀಯ ಮಟ್ಟದ 8 ಕಿಲೋಮೀಟರ್ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸೌಂದರ್ಯ ಕಾಲೇಜಿನ ವಿದ್ಯಾರ್ಥಿ ಶಿವಾಜಿ ಪಿ.ಎಂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಿಹಾರದ ಗಯಾದಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ 8 ಕಿಲೋಮೀಟರ್ ಗುಡ್ಡಗಾಡು ಓಟವನ್ನು 23.40 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಬಿ.ಎ ತೃತೀಯ ಸೆಮಿಸ್ಟರ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಕ್ರೀಡಾಪಟು ಶಿವಾಜಿ ಪಿ.ಎಂ ಸಂತಸ ಹಂಚಿಕೊಂಡಿದ್ದಾರೆ.

ಉತ್ತಮ ಸಾಧನೆ ತೋರುವ ಮೂಲಕ ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಕೋಚ್ ಮಂಟೂರ್ ಮತ್ತು ವಿಶ್ವನಾಥ್ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಹರೀಶ್ ಪಿ. ಎಂ, ಸುರೇಶ್ ರೆಡ್ಡಿ ಎಂ. ಎಸ್. ಸಂತಸ ವ್ಯಕ್ತಪಡಿಸಿದರು. ಕಾಲೇಜಿನ ಸಿಇಒ ಕೀರ್ತನ್ ಕುಮಾರ್ ಎಂ. ಪ್ರಾಚಾರ್ಯ ಡಾ. ಬಿ.ಎ. ವಾಸು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net