More

    ಅನಿಮಲ್​ ಚಿತ್ರದಲ್ಲಿ ಪೂರ್ತಿ ಬೆತ್ತಲಾಗಿದ್ದಕ್ಕೆ ತೃಪ್ತಿಗೆ ಸಿಕ್ಕ ಸಂಭಾವನೆ ಇಷ್ಟೇನಾ? ರಶ್ಮಿಕಾ ಪಡೆದ ಹಣವೆಷ್ಟು?

    ಮುಂಬೈ: ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್​ ಕಪೂರ್​ ಅಭಿನಯದ “ಅನಿಮಲ್”​ ಸಿನಿಮಾ 500 ಕೋಟಿ ರೂ.ಗೂ ಅಧಿಕ ಗಳಿಕೆಯೊಂದಿಗೆ ಬಾಕ್ಸ್​​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಸಿನಿಮಾದ ಪ್ರತಿ ಪಾತ್ರಗಳು ಕೂಡ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ನಟಿ ತೃಪ್ತಿ ದಿಮ್ರಿ ಅವರ ನಗ್ನ ದೃಶ್ಯ ಟಾಕ್​ ಆಫ್​ ದಿ ಟೌನ್ ಆಗಿದೆ.

    ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಹಲವು ಇಂಟಿಮೇಟ್ ದೃಶ್ಯಗಳಲ್ಲಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿದ್ದು, ಆಕೆಯ ಬೋಲ್ಡ್ ದೃಶ್ಯಗಳ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಂದಹಾಗೆ ಅನಿಮಲ್ ಚಿತ್ರದ ನಂತರ ತೃಪ್ತಿ ಅವರ ಫ್ಯಾನ್ ಫಾಲೋಯಿಂಗ್ ಕೂಡ ಬಹಳಷ್ಟು ಹೆಚ್ಚಾಗಿದೆ.

    ಮಾಮ್​, ಪೋಸ್ಟರ್​ ಬಾಯ್​, ಲೈಲಾ ಮಜ್ನು ಸೇರಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರೂ ಅನಿಮಲ್​ ಸಿನಿಮಾದ ಯಶಸ್ಸು ತೃಪ್ತಿ ದಿಮ್ರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ಬೆತ್ತಲಾಗಲು ದಿಮ್ರಿ ಪಡೆದುಕೊಂಡ ಸಂಭಾವನೆ ಎಷ್ಟಿರಬಹುದು ಎಂಬ ಪ್ರಶ್ನೆಗಳು ಸಹ ಕೇಳಿಬರುತ್ತಿವೆ. ಜೊಯಾ ಹೆಸರಿನ ತಮ್ಮ ಬೋಲ್ಡ್​ ಪಾತ್ರಕ್ಕೆ ದಿಮ್ರಿ ತುಂಬಾ ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

    ಸಿನಿ ಮೂಲಗಳ ಪ್ರಕಾರ ದಿಮ್ರಿ ಕೇವಲ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದೀಗ ಆಕೆ ಪಡೆದಿರುವ ಕಡಿಮೆ ಸಂಭಾವನೆ ಮೊತ್ತ ಕೇಳಿ ಅನೇಕರು ಹುಬ್ಬೇರಿಸಿದ್ದಾರೆ. ಇಷ್ಟೊಂದು ಬೋಲ್ಡ್​ ಆಗಿ ನಟಿಸಿದರೂ ದಿಮ್ರಿಗೆ ಸಿಕ್ಕ ಸಂಭಾವನೆ ಇಷ್ಟೇನಾ ಎನ್ನುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸಂಭಾವನೆಗೆ ಹೋಲಿಕೆ ಮಾಡಿದರೆ, ದಿಮ್ರಿ ಪಡೆದಿರುವ ಸಂಭಾವನೆ ಹತ್ತನೇ ಒಂದು ಭಾಗದಷ್ಟಿದೆ.

    ಹಾಗಾದರೆ, ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಅಂತಾ ನೋಡುವುದಾರೆ ಬರೋಬ್ಬರಿ 4 ಕೋಟಿ ರೂ. ಪಡೆದಿದ್ದಾರೆ. ರಣಬೀರ್​​ ಕಪೂರ್​ 70 ಕೋಟಿ ರೂ., ಬಾಬಿ ಡಿಯೋಲ್​ 4 ಕೋಟಿ ರೂ. ಮತ್ತು ಅನಿಲ್​ ಕಪೂರ್​ 2 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಅನಿಮಲ್​ ಚಿತ್ರ ಬಿಡುಗಡೆಯಾದ ನಂತರ, ತೃಪ್ತಿ ದಿಮ್ರಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 30 ಲಕ್ಷದಷ್ಟು ಹೆಚ್ಚಾಗಿದೆ. ಅನಿಮಲ್ ಬಿಡುಗಡೆಗೂ ಮುನ್ನ 6 ಲಕ್ಷದಷ್ಟಿದ್ದ ಫಾಲೋವರ್ಸ್ ಡಿಸೆಂಬರ್ 14ಕ್ಕೆ 37 ಲಕ್ಷ ತಲುಪಿರುವುದು ದಾಖಲೆಯೇ ಸರಿ. IMDb ಬಿಡುಗಡೆ ಮಾಡಿದ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ತೃಪ್ತಿ ದಿಮ್ರಿ ಕೂಡ ಅಗ್ರಸ್ಥಾನದಲ್ಲಿದ್ದಾರೆ ಎಂಬುದು ಗಮನಾರ್ಹವಾಗಿದೆ.

    ಅಂದಹಾಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಡಿಸೆಂಬರ್​ 1ರಂದು ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 500 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್​ ಸಿನಿಮಾ ಕಮಾಲ್​ ಮಾಡುತ್ತಿದೆ. (ಏಜೆನ್ಸೀಸ್​)

    ಎಲ್ಲೆಂದರಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು… ಅನಿಮಲ್​ ನಿರ್ದೇಶಕನ ಸ್ಫೋಟಕ ಹೇಳಿಕೆ ವೈರಲ್​!

    ಭಯೋತ್ಪಾದನೆ ಪಿತೂರಿ; ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts