ಗಂಗೊಳ್ಳಿ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಕಾರ್ಯಕ್ರಮದಡಿ 96ನೇ ತಿಂಗಳ ಕಾರ್ಯಕ್ರಮ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಭಾನುವಾರ ನಡೆಯಿತು.
ಸದಾನಂದ ಕುಂದಾಪುರ, ಗಣೇಶ್ ಪೂಜಾರಿ ಗಂಗೊಳ್ಳಿ, ಉಪನ್ಯಾಸಕಿ ಮಾಲತಿ ಗಣೇಶ್ ಪೂಜಾರಿ, ಉದ್ಯಮಿ ಶ್ರೀಧರ್ ನಾಯಕ್ ಗುಡ್ಡೆಯಂಗಡಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ರ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸಮೀಕ್ಷಾ ಪೂಜಾರಿ ಅವರನ್ನು ಅಕಾಡೆಮಿ ವತಿಯಿಂದ ಗೌರವಿಸಲಾಯಿತು. ಬಾಲ ಪ್ರತಿಭೆ ಶ್ಯಾಮ್ ಜಿ.ಎನ್.ಪೂಜಾರಿ ಅವರಿಂದ ಕೊಳಲು ವಾದನ ಕಚೇರಿ ನಡೆಯಿತು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.