ಗಂಗೊಳ್ಳಿ: ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳಿದ್ದರೂ ತಪ್ಪು ಉಸಿರಾಟ ಪ್ರಕ್ರಿಯೆ, ತಪ್ಪು ಆಹಾರ ಪದ್ಧತಿ, ತಪ್ಪು ಜೀವನ ಶೈಲಿಗಳಿಂದ ವರ್ಷದಿಂದ ವರ್ಷಕ್ಕೆ ಮನುಷ್ಯನ ಆರೋಗ್ಯ ಕ್ಷೀಣಿಸುತ್ತಿದೆ. ಯೋಗಮಾರ್ಗದ ಮೂಲಕ ಸಾಧಿಸಿದ ಕ್ರಮಬದ್ಧವಾದ ಉಸಿರಾಟದಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಬೈಂದೂರು ಸಿದ್ಧ ಸಮಾಧಿ ಯೋಗ ಶಿಕ್ಷಕ ಆಚಾರ್ಯ ಕೇಶವ ಬೆಳ್ನಿ ಹೇಳಿದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಾಲೆ 1800 ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಶರಣ ಕುಮಾರ, ರವೀಂದ್ರ ಬೈಂದೂರು, ಉಪ ಪ್ರಾಂಶುಪಾಲ ರಾಮ ದೇವಾಡಿಗ, ಯೋಗ ಶಿಕ್ಷಕರು, ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು. ಶಕುಂತಳಾ ಸ್ವಾಗತಿಸಿ, ಸಿಂಚನಾ ಪ್ರಕಾಶ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಶ್ರೀಯಾ ವಂದಿಸಿದರು.