ಸನಾತನ ಧರ್ಮ ಜಾಗೃತಿ ಮೂಡಿಸುವ ಕೆಲಸ : ಶ್ರೀ ಚಂದ್ರಶೇಖರ ಸ್ವಾಮೀಜಿ ಮೆಚ್ಚುಗೆ

New Project (53)
Published on

ಮೂಲ್ಕಿ: ಸನಾತನ ಧರ್ಮ ಜಾಗೃತಿ ಮೂಡಿಸುವ ಮೂಲಕ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸುವ ಮಂಜೇಶ್ವರ ಕೃಷ್ಣ ಭಟ್ ಅವರ ಸಾಧನೆ ಅಭಿನಂದನೀಯ ಎಂದು ಅಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ವಿದ್ವಾನ್, ಜ್ಯೋತಿಷ ಶಿರೋಮಣಿ ಮಂಜೇಶ್ವರ ಕೃಷ್ಣ ಭಟ್ ಅವರನ್ನು ಗೌರವಿಸಿ ಮಾತನಾಡಿ, ಗಡಿನಾಡಿನ ಕೇರಳದ ಮಂಜೇಶ್ವರದಲ್ಲಿ ತಮ್ಮ ವಿದ್ವತ್ ಪಸರಿಸಿ ಧಾರ್ಮಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮೂಲಕ ಗಡಿನಾಡಿನ ಕನ್ನಡಿಗರಿಗೆ ಹೆಮ್ಮೆಯ ಮಾತಾಗಿದ್ದಾರೆ ಎಂದರು.

ಬಳಿಕ ಆಶ್ರಮದಲ್ಲಿ ಪುಂಗನೂರು ತಳಿಯ ಗೋವಿಗಾಗಿ ನಿರ್ಮಿಸಿದ ನೂತನ ನಂದಿನಿ ಕುಟೀರ ವೀಕ್ಷಿಸಿದರು. ಆಶ್ರಮದ ನಿರ್ದೇಶಕರಾದ ರಜನಿ ಸಿ.ಭಟ್, ರಾಹುಲ್ ಚಂದ್ರಶೇಖರ್, ಸುರೇಖಾ ಕೃಷ್ಣ ಭಟ್ ಉಪಸ್ಥಿತರಿದ್ದರು.

ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಸಾಗತಿಸಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net