

ಕಡಬ: ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪಾರ್ವತಿ ಮಾತೃ ಮಂಡಳಿ ವತಿಯಿಂದ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು.
ವೆಂಕಟ್ರಮಣ ಕುದ್ರೆತ್ತಾಯ ನೇತೃತ್ವದಲ್ಲಿ ಪೂಜೆ ಕೈಂಕರ್ಯ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಪ್ರಮುಖ್ ಲಲಿತಾ ಪಲ್ಲಡ್ಕ ವಹಿಸಿದ್ದರು. ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ ಶ್ರೀ ಸದಾಶಿವ ಸಭಾಭವನದ ಲೆಕ್ಕಪತ್ರ ಮಂಡಿಸಿ, ಧಾರ್ಮಿಕ ಉಪನ್ಯಾಸ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷ ಭವಾನಿಶಂಕರ ಪರಂಗಾಜೆ, ಬೈಲುವಾರು ಮಹಿಳಾ ಪ್ರಮುಖರಾದ ಶ್ವೇತಾ ಸಬಳೂರು, ಸುಶೀಲ ಒ.ಕೆ, ವಸಂತಿ ಕಲ್ಕಾಡಿ, ಶಶಿಕಲಾ ಕೊನೆಮಜಲು, ಲೀಲಾವತಿ ವೈಪಾಲು, ಸ್ಮಿತಾ ಪಾಜಳಿಕೆ, ಮೋಹಿನಿ ವಳಕಡಮ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ವನಜ ಪಲ್ಲಡ್ಕ, ವಿನಯ ರೈ ಕೊಲಪಟ್ಟೆ, ಸಂಜೀವ ಗೌಡ ಕೊನೆಮಜಲು, ಶ್ರೀರಾಮ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅನ್ನದಾನ ಸೇವಾರ್ಥಿಗಳನ್ನು ಗೌರವಿಸಲಾಯಿತು. ಯೋಗದಲ್ಲಿ ಸಾಧನೆ ಮಾಡಿದ ಆಲಂಕಾರು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ, ಕೊಲ ಗ್ರಾಮದ ಸಂಕೇಶ ನಿವಾಸಿ ಉಮೇಶ್ ಮತ್ತು ಪೂರ್ಣಿಮ ದಂಪತಿ ಪುತ್ರಿ ಅಶ್ವಿಕಾ ಅವರನ್ನು ಸನ್ಮಾನಿಸಲಾಯಿತು. ಜಯಂತಿ ಆರ್.ಗೌಡ ಪ್ರಸ್ತಾವಿಸಿ ಸ್ವಾಗತಿಸಿದರು. ಯಕ್ಷತಾ ಏಣಿತ್ತಡ್ಕ ವಂದಿಸಿದರು. ಸುನಿತಾ ಕೆಮ್ಮಾರ ನಿರೂಪಿಸಿದರು.