

ಗಂಗೊಳ್ಳಿ: ತಲ್ಲೂರು ಗ್ರಾಮದ ಕೋಟೆಬಾಗಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿ ವಯೋ ನಿವೃತ್ತರಾದ ವಿಠಲ ಕಾಮತ್ ಅವರನ್ನು ಎಸ್‌ಡಿಎಂಸಿ, ವಿದ್ಯಾರ್ಥಿಗಳು, ಗ್ರಾ.ಪಂ ಜಂಟಿಯಾಗಿ ಬೀಳ್ಕೊಟ್ಟರು.
ಹಿರಿಯ ವಕೀಲ ಟಿ.ಬಿ. ಶೆಟ್ಟಿ, ತಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮತಿ ಹೆಗ್ಡೆ, ಸದಸ್ಯರಾದ ಉದಯ್ ಕುಮಾರ್, ಕೃಷ್ಣ, ಅಕ್ಷಯ್, ಸಂಜೀವ ದೇವಾಡಿಗ, ಚಂದ್ರ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ, ಉಪಾಧ್ಯಕ್ಷ ವನಜಾ, ಕೆಕೆಸ್ಟಾರ್ ಅಧ್ಯಕ್ಷ ಪ್ರಶಾಂತ, ಉದ್ಯಮಿ ಸುಂದರ ಶೆಟ್ಟಿ, ಶಾಲೆಯ ಸಹ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಹರ್ಷ ಕಾರ್ಯಕ್ರಮ ನಿರ್ವಹಿಸಿದರು.