ಕಾರ್ಕಳ: ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಸ್ಟೂಡೆಂಟ್ ಕ್ಲಬ್, ಎನ್‌ಎಂಎಎಂಐಟಿ ಸಹಯೋಗದಲ್ಲಿ ಇತ್ತೀಚೆಗೆ ವಿಶ್ವ ಮಾನದಂಡಗಳ ಗುಣಮಟ್ಟ ದಿನ ಆಚರಿಸಲಾಯಿತು.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ. ರಮೇಶ್ ಮಿತ್ತಂತಾಯ ಶುಭಹಾರೈಸಿದರು. ವಿದ್ಯಾರ್ಥಿ ನಾಯಕರು ಮತ್ತು ಕ್ಲಬ್‌ನ ಪ್ರಮುಖ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ವಿದ್ಯಾರ್ಥಿಗಳಾದ ವೈಷ್ಣವ್ ಶೆಣೈ, ಅನನ್ಯಾ ಶೆಟ್ಟಿ, ಪಿ.ಅಕ್ಷರಾ ಮತ್ತು ಸುಮಿತ್ ಹೆಗ್ಡೆ ಅವರ ನಾಯಕತ್ವವನ್ನು ಶ್ಲಾಘಿಸಲಾಯಿತು. ಬಳಿಕ ರಸಪ್ರಶ್ನೆ ಸ್ಪರ್ಧಾ ವಿಜೇತರನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ವೈಷ್ಣವ್ ಶೆಣೈ ಸ್ವಾಗತಿಸಿದರು. ಡಾ.ಅನಂತ ಕೃಷ್ಣ ಸೋಮಯಾಜಿ ಬಿಐಎಸ್ ಕ್ಲಬ್ ಪರಿಚಯಿಸಿದರು. ಡಾ.ಅನುಷಾ ಆರ್.ಶರತ್ ಸದಸ್ಯರ ಪಟ್ಟಿ ವಾಚಿಸಿದರು. ತನುಶ್ರೀ ಎ. ಹೆಗ್ಡೆ ವಿಜೇತರ ಪಟ್ಟಿ ವಾಚಿಸಿದರು. ಅನನ್ಯಾ ಶೆಟ್ಟಿ ವಂದಿಸಿದರು. ಶ್ರೇಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.