ಕೋಟ: ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ 45ರ ಸಂಭ್ರಮದಲ್ಲಿದೆ. ಆ ಪ್ರಯುಕ್ತ ಕೋಟತಟ್ಟು ಪಡುಕರೆ ಕೃಷಿಕ ಮಹಿಳೆ ಅನುಸೂಯ ಹಂದೆ ಅವರನ್ನು ಏ.26ರಂದು ಗೌರವಿಸಲಾಗುವುದು.

ಕಾರ್ಯಕ್ರಮಕ್ಕೆ ಮಣೂರು ಗೀತಾನಂದ ಫೌಂಡೇಶನ್, ಕೋಟ ರೈತ ಧ್ವನಿ ಸಂಘ, ಕಾರ್ಕಡ ಗೆಳೆಯರ ಬಳಗ, ರೋಟರಿ ಕ್ಲಬ್ ಸಾಲಿಗ್ರಾಮ, ಸ್ನೇಹಕೂಟ ಸಹಯೋಗ ವಹಿಸಲಿವೆ ಎಂದು ಸಂಘದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.