4 ಕೋಟಿ ವೆಚ್ಚದಲ್ಲಿ ಬುಡಕಟ್ಟು ಕಾಲನಿ ರಸ್ತೆ ಅಭಿವೃದ್ಧಿ

gan (3)
Published on

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬುಡಕಟ್ಟು ಜನಾಂಗ ಇರುವ ನಾಲ್ಕು ಕಡೆಗಳಲ್ಲಿ ಸುವಾರು 4 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾವೇಂದ್ರ ಹೇಳಿದರು. ಪಿಎಂ ಜನ್‌ಮನ್ ಯೋಜನೆಯಡಿ ಸುವಾರು 94.34 ಲಕ್ಷ ರೂ. ವೆಚ್ಚದಲ್ಲಿ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಕೂರು ನಾರ್ಕಳಿ ಮದುಕೋಡ್ಲು ಎಸ್‌ಟಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ವಾಜಿ ಅಧ್ಯಕ್ಷ ದೀಪಕ್‌ಕುವಾರ್ ಶೆಟ್ಟಿ, ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ ದೇವಾಡಿಗ, ಜಿಪಂ ವಾಜಿ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಇಂದಿರಾ ಶೆಡ್ತಿ, ಡಾ.ಅತುಲ್ ಕುವಾರ್ ಶೆಟ್ಟಿ, ಕರಣ್ ಪೂಜಾರಿ, ಗೋಪಾಲ ಪೂಜಾರಿ, ವಾಲತಿ ನಾಯ್ಕ, ಚಂದ್ರಯ್ಯ ಆಚಾರಿ ಕಳಿ, ಸುಬ್ಬಣ್ಣ ಶೆಟ್ಟಿ, ಚಿತ್ತರಂಜನ್ ಹೆಗ್ಡೆ, ಅಪ್ಪು ಕುಲಾಲ್, ರಾಜೇಶ ರಾಮಣ್ಣ, ಪ್ರಶಾಂತ ಕುಲಾಲ್, ಶರತ್ ಶೆಟ್ಟಿ, ಉಮೇಶ ಶೆಟ್ಟಿ ಕಲ್ಗದ್ದೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಶಂಕರ, ಐಟಿಡಿಪಿ ಇಂಜಿನಿಯರ್ ನಾರಾಯಣ ಸ್ವಾಮಿ, ಗುತ್ತಿಗೆದಾರ ಮಹೇಶ ಹೆಗ್ಡೆ ಮೊಳಹಳ್ಳಿ, ಗ್ರಾಪಂ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಲ್‌ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಸುವಾರು 800 ಕೋಟಿ ರೂ. ವೆಚ್ಚದಲ್ಲಿ ಸುಮಾರು 230 ಓವರ್ ಹೆಡ್‌ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ವಾರ್ಚ್ ಅಂತ್ಯದೊಳಗೆ ಪ್ರತಿ ಮನೆಗೂ ನಳ್ಳಿ ನೀರು ನೀಡಲು ಯೋಜನೆ ರೂಪಿಸಲಾಗಿದೆ. ಬೈಂದೂರು ಕ್ಷೇತ್ರ ಅತ್ಯುತ್ತಮ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲಿದೆ. ಶೀಘ್ರದಲ್ಲೇ 100 ಕೋಟಿ ರೂ. ವೆಚ್ಚದಲ್ಲಿ ಮರವಂತೆ, ಸೋಮೇಶ್ವರ ಮತ್ತು ಕೊಲ್ಲೂರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆ ಅನುಷ್ಠಾನಗೊಳ್ಳಲಿದೆ. ಕೊಲ್ಲೂರಿನಲ್ಲಿ ಕೇಬಲ್ ಕಾರ್ ಯೋಜನೆ ಕೂಡ ಅನುಷ್ಠಾನವಾಗಲಿದೆ. ಬಿ.ವೈ.ರಾವೇಂದ್ರ, ಶಿವಮೊಗ್ಗ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net