ಹಸುವಿನ ಹೊಟ್ಟೆಯಲ್ಲಿ ಬೆಳೆಯುವ ಈ ವಸ್ತುವಿನ ಬೆಲೆ ಚಿನ್ನಕ್ಕಿಂತ ಹೆಚ್ಚು! ಅಷ್ಟಕ್ಕೂ ಆ ವಸ್ತು ಯಾವುದೆಂದರೇ..... Cow Gallstones

ಹಸುವಿನ ಹೊಟ್ಟೆಯಲ್ಲಿ ರೂಪುಗೊಳ್ಳುವ ಕಲ್ಲುಗಳಿಗೆ ಇಂದು ಚಿನ್ನಕ್ಕಿಂತ ಹೆಚ್ಚು ಬೆಲೆ
ಹಸುವಿನ ಹೊಟ್ಟೆಯಲ್ಲಿ ರೂಪುಗೊಳ್ಳುವ ಕಲ್ಲುಗಳಿಗೆ ಇಂದು ಚಿನ್ನಕ್ಕಿಂತ ಹೆಚ್ಚು ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಹಸುವಿನ ಹೊಟ್ಟೆಯಲ್ಲಿ ರೂಪುಗೊಳ್ಳುವ ಕಲ್ಲುಗಳಿಗೆ ಇಂದು ಚಿನ್ನಕ್ಕಿಂತ ಹೆಚ್ಚು ಬೆಲೆ
  • ಚೀನಾದಲ್ಲಿ ವೈಧ್ಯಕೀಯ ಕ್ಷೇತ್ರದಲ್ಲಿ ಬಳಕೆ
  • ಪ್ರತಿ ಔನ್ಸ್‌ಗೆ ಸುಮಾರು 5,800 ಅಮೆರಿಕನ್ ಡಾಲರ್
Amazing Facts: ನಾವೆಲ್ಲಾ ಸಾಧಾರಣವಾಗಿ ಚಿನ್ನ ಅಥವಾ ವಜ್ರ ಅತಿ ದುಬಾರಿ ಎಂದುಕೊಂಡಿರುತ್ತೇವೆ. ಆದರೆ, ಮಾಂಸ ಉದ್ಯಮದಲ್ಲಿ ಅಡಗಿರುವ ಒಂದು ಅಚ್ಚರಿಯ ವಿಷಯ ನಿಮ್ಮನ್ನು ದಂಗಾಗಿಸುತ್ತದೆ. ಹಸುಗಳ ಪಿತ್ತಕೋಶದಲ್ಲಿ ರೂಪುಗೊಳ್ಳುವ ಸಣ್ಣ ಪಿತ್ತಗಲ್ಲುಗಳು (Cow Gallstones) ಇಂದು ವಿಶ್ವದ ಅತ್ಯಂತ ದುಬಾರಿ ನೈಸರ್ಗಿಕ ಸಂಪನ್ಮೂಲಗಳ ಪಟ್ಟಿಗೆ ಸೇರಿವೆ.
ಹೌದು, ನೀವು ಓದುತ್ತಿರುವುದು ನಿಜ. ಇವುಗಳ ಬೆಲೆ ಕೇಳಿದರೆ ಚಿನ್ನವೇ ನಾಚಿ ನಿರಾಗಬೇಕು.. ಬನ್ನಿ ಈ ಹಸುವಿನ  ಪಿತ್ತಗಲ್ಲುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಚಿನ್ನಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆ!

ವರದಿಗಳ ಪ್ರಕಾರ, 2025ರಲ್ಲಿ ಈ ಹಸುವಿನ ಪಿತ್ತಗಲ್ಲುಗಳ ಬೆಲೆ ಪ್ರತಿ ಔನ್ಸ್‌ಗೆ ಸುಮಾರು 5,800 ಅಮೆರಿಕನ್ ಡಾಲರ್ ತಲುಪಿತ್ತು. ಅಂದಿನ ಚಿನ್ನದ ಬೆಲೆಗೆ ಹೋಲಿಸಿದರೆ, ಇದು ಚಿನ್ನಕ್ಕಿಂತ ಎರಡು ಪಟ್ಟು ಹೆಚ್ಚು. ಕೇವಲ ಒಂದು ಸಣ್ಣ ಕಲ್ಲು ಲಕ್ಷಾಂತರ ರೂಪಾಯಿಗಳ ಮೌಲ್ಯವನ್ನು ಹೊಂದಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಚೀನಾದಲ್ಲಿ ಇಷ್ಟೊಂದು ಡಿಮ್ಯಾಂಡ್ ಏಕೆ?

ಈ ಕಲ್ಲುಗಳು ಚೀನಾದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ನಿಯು ಹುವಾಂಗ್ (Niu Huang) ಎಂದು ಕರೆಯಲ್ಪಡುತ್ತವೆ. ಸಾವಿರಾರು ವರ್ಷಗಳಿಂದ ಚೀನಾದಲ್ಲಿ ಇವುಗಳನ್ನು ಔಷಧಿಯಾಗಿ ಬಳಸಲಾಗುತ್ತಿದೆ.
ಮುಖ್ಯವಾಗಿ ಪಾರ್ಶ್ವವಾಯು (Stroke), ಮೂರ್ಛೆ ರೋಗ, ತೀವ್ರ ಜ್ವರ ಮತ್ತು ಮೆದುಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಅಂಗೋಂಗ್ ನಿಯುಹುವಾಂಗ್ ವಾನ್ ಎಂಬ ಔಷಧ ತಯಾರಿಕೆಗೆ ಈ ಪಿತ್ತಗಲ್ಲುಗಳು ಅನಿವಾರ್ಯವಂತೆ. ಸದ್ಯ ಚೀನಾದಲ್ಲಿ ಪಾರ್ಶ್ವವಾಯು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಈ ಔಷಧಕ್ಕೆ ಭಾರಿ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದು ಬೆಲೆ ಗಗನಕ್ಕೇರಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಕಳ್ಳಸಾಗಣೆಯೂ ಶುರುವಾಗಿದೆ!

ಹಸುಗಳಲ್ಲಿ ಈ ಪಿತ್ತಗಲ್ಲುಗಳು ರೂಪುಗೊಳ್ಳುವುದು ತುಂಬಾ ಅಪರೂಪ. ಹೆಚ್ಚಾಗಿ ವಯಸ್ಸಾದ ಹಸುಗಳಲ್ಲಿ ಮಾತ್ರ ಇವು ಬೆಳೆಯುತ್ತವೆ. ಆದರೆ, ಈಗಿನ ದಿನಗಳಲ್ಲಿ ಜಾನುವಾರುಗಳನ್ನು ಚಿಕ್ಕ ವಯಸ್ಸಿನಲ್ಲೇ ವಧೆ ಮಾಡುವುದರಿಂದ, ಈ ಕಲ್ಲುಗಳ ಕೊರತೆ ಉಂಟಾಗಿದೆ. ಈ ಕೊರತೆಯೇ ಬ್ರೆಜಿಲ್, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ದೇಶಗಳಲ್ಲಿ ಪಿತ್ತಗಲ್ಲುಗಳ ಕಳ್ಳತನ ಮತ್ತು ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ. ಈಗ ಕಳ್ಳರು ಜಾನುವಾರುಗಳನ್ನು ಕದಿಯುವ ಬದಲು, ಅವುಗಳ ದೇಹದಲ್ಲಿ ಈ ಕಲ್ಲುಗಳಿವೆಯೇ ಎಂದು ಹುಡುಕಲು ಇಳಿದ್ದಿದ್ದಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಆಶ್ಚರ್ಯದ ಪ್ರತಿಕ್ರಿಯೆ

ಈ ವಿಷಯ ತಿಳಿದು ಸೋಷಿಯಲ್ ಮೀಡಿಯಾ ಬಳಕೆದಾರರು ಅಕ್ಷರಶಃ ಆಘಾತಕ್ಕೊಳಗಾಗಿದ್ದಾರೆ. ಇಷ್ಟು ದಿನ ನಮಗೆ ಗೊತ್ತೇ ಇರಲಿಲ್ಲ, ಈಗ ಜನರು ಚಿನ್ನ ಬಿಟ್ಟು ಹಸುವಿನ ಹಿಂದೆ ಬೀಳುತ್ತಾರೆ ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ನಮಗೆ ತಿಳಿದಿಲ್ಲದ ಎಷ್ಟೋ ರಹಸ್ಯಗಳಿವೆ ಎಂಬುದು ಅನೇಕರ ಅಭಿಪ್ರಾಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net