"ಓದಿ ಏನು ಸಾಧಿಸಿದೆ, ಮದುವೆ ಮಾಡ್ಕೋ ಅಂತಿದ್ದಾರೆ": NEET ಹೋರಾಟಕ್ಕೆ ಮದುಮಗಳ ಎಂಟ್ರಿ; ವಿಡಿಯೋ ವೈರಲ್! Bride Protester in Jantar Mantar
ಓದಿದರೂ ಕೆಲಸ ಸಿಗುವುದಿಲ್ಲ, ಮದುವೆ ಎರಡನೇ ಆಯ್ಕೆಯಾಗಿದೆ : ಯುವತಿ ಆಕ್ರೋಶ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ನೀಟ್ ವಿರೋಧಿ ಪ್ರತಿಭಟನೆ
ವಧುವಿನ ಗೆಟಪ್ನಲ್ಲಿ ಭಾಗವಹಿಸಿದ ಯುವತಿ
ಓದಿದರೂ ಕೆಲಸ ಸಿಗುವುದಿಲ್ಲ, ಮದುವೆ ಎರಡನೇ ಆಯ್ಕೆಯಾಗಿದೆ : ಯುವತಿ ಆಕ್ರೋಶ
ನವದೆಹಲಿ: ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆದಿದ್ದು, ಈ ಹೋರಾಟಕ್ಕೆ ವ್ಯಾಪಕ ಬೆಂಬಲ ಕಂಡುಬಂದಿತ್ತು. ಸದ್ಯ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಈ ಹೋರಾಟವನ್ನು ಈಗ ಸಿಜೆಪಿ ಹಿಂಪಡೆದುಕೊಂಡಿದೆ.
ಆದರೆ, ಕಳೆದೊಂದು ವಾರದಿಂದ ತೀವ್ರಗೊಂಡ ಈ ಹೋರಾಟಕ್ಕೆ ದೇಶದ ಮೂಲೆ-ಮೂಲೆಗಳಿಂದ ಜನರ ಬೆಂಬಲ ದೊರೆತಿತ್ತು. ಆದರೆ ನಿನ್ನೆ ಶುಕ್ರವಾರ (ಜು.24) ಈ ಹೋರಾಟಕ್ಕೆ ವಧುವಿನ ಗೆಟಪ್ (Bride Protester in Jantar Mantar) ನಲ್ಲಿ ಆಗಮಿಸಿದ್ದ ಯುವತಿಯೊಬ್ಬಳ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಯುವತಿಯು ಹೇಳುವ ಪ್ರಕಾರ, ನಾನು ಒಬ್ಬಳು ವಿದ್ಯಾರ್ಥಿ ಇದ್ದೆನೆ, ನಾನು ಕೂಡ ನೀಟ್ ಪರೀಕ್ಷೆಗೆ ತಯಾರಿ ನಡೆಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ ಇಲ್ಲಿ ಆಗುತ್ತಿರುವುದನ್ನು ನೋಡಿ ನಾನು ನನ್ನ ಮನಸ್ಸನ್ನು ಬದಲಿಸಿದ್ದೆನೆ ಎಂದಿದ್ದಾಳೆ.
ಪ್ರಸ್ತುತ ಜಗತ್ತಿನಲ್ಲಿ ಏನು ಓದಿದರೂ ಸರಿಯಾಗಿ ಕೆಲಸ ಸಿಗುತ್ತಿಲ್ಲ, ಹೀಗಾಗಿ ಮದುವೆ ಎನ್ನುವುದು ಎರಡನೇ ಆಯ್ಕೆಯಾಗಿ ಮಾರ್ಪಟ್ಟಿದೆ ಯುವತಿ ಬೇಸರ ವ್ಯಕ್ತ ಪಡಿಸಿದ್ದಾಳೆ.
ನನ್ನ ಮನೆಯಲ್ಲಿ ಕೂಡ ಅಪ್ಪ-ಅಮ್ಮ ನೀನು ಇಷ್ಟೆಲ್ಲಾ ಓದಿದೆ, ಓದಿ ಏನು ಸಾಧಿಸಿದೆ? ಎಂದು ಕೇಳುತ್ತಾರೆ. ಮತ್ತೆ ಓದುವುದೆಲ್ಲಾ ಬೇಡ ಬೇಗ ಮದುವೆಯಾಗು ಎಂದು ಕಿರಿಕಿರಿ ಮಾಡುತ್ತಾರೆಂದು ಯುವತಿ ಆಕ್ರೋಶವನ್ನು ಹೊರಹಾಕಿದ್ದಾಳೆ.
ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕಿದೆ, ಇಲ್ಲಿ ವಿದ್ಯಾರ್ಥಿಗಳಿಗೆ ಖಂಡಿತವಾಗಿ ಅನ್ಯಾಯವಾಗಿದೆ. ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟು ಬಿಡಿಲಿ ಎಂದು ಯುವತಿ ವಿಡಿಯೋನಲ್ಲಿ ವಿನಂತಿಸಿ ಕೊಂಡಿದ್ದಳು, (ಏಜನ್ಸೀಸ್).