ನಮ್ಮನ್ನು 'ಕಾಕ್ರೋಚ್​' ಎಂದಿದಕ್ಕೆ ಥ್ಯಾಂಕ್ಸ್​: ಅಂದು CJI 'ಆ' ಮಾತನ್ನು ಹೇಳದಿದ್ದರೆ ಇಂದು ಪ್ರಧಾನ್​ ರಾಜೀನಾಮೆ ನೀಡುತ್ತಿರಲಿಲ್ಲ: ಅಭಿಜಿತ್​ ದೀಪ್ಕೆ! Abhijit Dipke on CJI Surya Kant

ಸಿಜೆಐ ತಮ್ಮನ್ನು 'ಕಾಕ್ರೋಚ್' ಎಂದು ಕರೆಯದಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ: ಅಭಿಜಿತ್ ದೀಪ್ಕೆ
ಸಿಜೆಐ ತಮ್ಮನ್ನು 'ಕಾಕ್ರೋಚ್' ಎಂದು ಕರೆಯದಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ: ಅಭಿಜಿತ್ ದೀಪ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ಸಿಜೆಐ ತಮ್ಮನ್ನು 'ಕಾಕ್ರೋಚ್' ಎಂದು ಕರೆಯದಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ: ಅಭಿಜಿತ್ ದೀಪ್ಕೆ
  • ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿಕೆ
  • ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ನಂತರ ಅವರು ಮುಖ್ಯ ನ್ಯಾಯಾಧೀಶರಿಗೆ ಧನ್ಯವಾದ
ನವದೆಹಲಿ: ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕ್ರಾಕ್ರೋಚ್​ ಜನತಾ ಪಾರ್ಟಿ ನಡೆಸಿದ್ದ ಹೋರಾಟಕ್ಕ ಜನ ದೊರೆತಿದ್ದು, ಸಿಜೆಪಿ ಆಗ್ರಹದಂತೆ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್​ ಶನಿವಾರ (ಜು.25) ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಕಾಕ್ರೋಚ್​ ಪಾರ್ಟಿಯ ಸ್ಥಾಪಕ ಅಭಿಜಿತ್​ ದೀಪ್ಕೆ, ಭಾರತದ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ (Abhijit Dipke on CJI Surya Kant)​ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಕಾಕ್ರೋಚ್​​ ಎಂದಿದಕ್ಕೆ ಧನ್ಯವಾದ!

ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಘೋಷಿಸುತ್ತಿದ್ದಂತೆ ಅಭಿಜಿತ್​ ದೀಪ್ಕೆ ಹರ್ಷ ವ್ಯಕ್ತಪಡಿಸಿದ್ದು, ಇದು ಕಾಕ್ರೋಚ್​ಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದಿದ್ದಾರೆ.
ಹಾಗೆಯೇ ನಮ್ಮಂಥ ಯುವಕ-ಯುವತಿಯರಿಗೆ ಕಾಕ್ರೋಚ್​ಗಳೆಂದು ಕರೆದಿದ್ದ ಭಾರತದ ಮುಖ್ಯನ್ಯಾಯಾಧೀಶರಾದ ಸೂರ್ಯಕಾಂತ್​ ಅವರಿಗೂ ಧನ್ಯವಾದಗಳು.ಅವರು ಆ ದಿನ ನಮನ್ನು ಕಾಕ್ರೋಚ್​ಗಳು ಎಂದು ಕರೆಯದೇ ಹೋಗಿದ್ದರೆ, ನಮ್ಮ ಪಾರ್ಟಿ ಹುಟ್ಟುತ್ತಿರಲಿಲ್ಲ, ಈ ಹೋರಾಟವಾಗುತ್ತಿರಲಿಲ್ಲ ಹಾಗೂ ಮಕ್ಕಳಿಗೆ ನ್ಯಾಯ ಸಿಗುತ್ತಲೂ ಇರಲಿಲ್ಲ ಎಂದಿದ್ದಾರೆ.

ನ್ಯಾಯಾಧೀಶರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಕಾಕ್ರೋಚ್​ಗಳು!

ಮೇ.15ರಂದು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸಿಜೆಐ ಸೂರ್ಯಕಾಂತ್​ ಅವರು, ಕೆಲವೊಂದಿಷ್ಟು ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ವೃತ್ತಿಯಲ್ಲಿ ಯಾವುದೇ ಸ್ಥಾನಮಾನವಿಲ್ಲ, ತಮ್ಮನ್ನು ತಾವೇ ಏನೋ ಎಂದಿಕೊಂಡಿದ್ದಾರೆ. ಅವರೆಲ್ಲಾ ಕಾಕ್ರೋಚ್​ (ಜಿರಳೆ) ಗಳಿದ್ದಂತೆ ಎಂದು ಹೇಳಿದ್ದರು.
ಆದರೆ ಸಿಜೆಐ ಅವರು ಈ ಮಾತನ್ನು ದೇಶದ ಎಲ್ಲಾ ಯುವಕ/ಕಿ ಗಲ್ಲ ಬದಲಾಗಿ ನಕಲಿ ವಕೀಲಿ ವೃತ್ತಿಯಲ್ಲಿ ನಿರತರಾಗಿರುವವರಿಗೆ ಈ ಮಾತನ್ನು ಹೇಳಿದ್ದರು. ಆದರೆ ಈ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಅಭಿಜಿತ್​ ದೀಪ್ಕೆ ಎಂಬಾತ ಕಾಕ್ರೋಚ್​ ಜನತಾ ಪಾರ್ಟಿ ಎಂಬ ಸೋಷಿಯಲ್​ ಮೀಡಿಯಾ ಖಾಯೆಯನ್ನು ಸೃಷ್ಟಿಸಿ ದೇಶದ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ.

ನಮ್ಮ ಜೊತೆ ನಿಮ್ಮ ಆಟ ಬೇಡ: ಅಭಿಜಿತ್​ ದೀಪ್ಕೆ

'ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ನಾವು ಸಾಧಿಸಿದ್ದೇವೆ, ಪ್ರಜಾಪ್ರಭುತ್ವ ಗೆದ್ದಿದೆ, ಜಿರಳೆಗಳು ಗೆದ್ದಿವೆ. ಈಗ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಮತ್ತು ಪೊಲೀಸರ ದೌರ್ಜನ್ಯದ ವಿರುದ್ಧ ಕ್ರಮ ಜರುಗಬೇಕು ಎಂದಿದ್ದಾರೆ.
ವಿದ್ಯಾರ್ಥಿಗಳ ಪೊಲೀಸರು ಲಾಠಿ ಬೀಸಿದ್ದೀರಿ ಅಲ್ವಾ? ನಮ್ಮ ಜೊತೆ ನಿಮ್ಮ ಆಟ ಬೇಡ. ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕಾಕ್ರೋಚ್​ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net