ಧರ್ಮೇಂದ್ರ ಪ್ರಧಾನ್​ ರಾಜೀನಾಮೆ: ಉದ್ವಿಗ್ನ ಸ್ಥಿತಿ ಅಂತ್ಯ; ದೆಹಲಿಯಲ್ಲಿ ಮೆಟ್ರೋ ಸೇವೆ ಪುನರಾರಂಭ! Delhi Metro Services Resume

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ; ದೆಹಲಿಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಪುನರಾರಂಭ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ; ದೆಹಲಿಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಪುನರಾರಂಭ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ
  • ದೆಹಲಿಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆ ಪುನರಾರಂಭ
  • ರಾಜೀವ್ ಚೌಕ್, ಮಂಡಿ ಹೌಸ್ ಸೇರಿದಂತೆ 18 ಮೆಟ್ರೋ ನಿಲ್ದಾಣಗಳಲ್ಲಿ ಆರಂಭವಾಗಲಿರುವ ಸೇವೆ
ನವದೆಹಲಿ: ಕಳೆದೊಂದು ವಾರದಿಂದ ನೀಟ್​ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆ ಸುರಕ್ಷತಾ ದೃಷ್ಟಿಯಿಂದ ದೆಹಲಿಯ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಸಾರಿಗೆ ಸೇವೆಗಳನ್ನು ನಿಲ್ಲಿಸಲಾಗಿತ್ತು.
ಇಂದು (ಶನಿವಾರ, ಜು.25) ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ತಾತ್ಕಾಲಿಕವಾಗಿ ಸ್ಥಗಿವಾಗಿದ್ದ 18 ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ಆರಂಭವಾಗಲಿದೆ (Delhi Metro Services Resume) ಎಂದು ದೆಹಲಿ ಮೆಟ್ರೋ ಆಡಳಿತ ತಿಳಿಸಿದೆ.
ಸೋಮವಾರ (ಜು.20) ರಂದು ದೆಹಲಿಯಲ್ಲಿ ನಡೆದಿದ್ದ ಬೃಹತ್​ ಪ್ರತಿಭಟನೆ ಹಿನ್ನಲೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಉದ್ವಗ್ನ ಪರಿಸ್ಥಿತಿ ಉಂಟಾದ ಹಿನ್ನಲೆ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶಿಸಲಾಗಿತ್ತು.
ರಾಜೀವ್​ ಚೌಕ್​, ಮಂಡಿ ಹೌಸ್​ ಮೆಟ್ರೋ ಆರಂಭ!
ದೆಹಲಿಯಲ್ಲಿ ನೀಟ್​ ಪರೀಕ್ಷೆ ವಿರೋಧಿಸಿ ಪ್ರತಿಭಟನೆ ಪ್ರಾರಂಭವಾದ ಹಿನ್ನಲೆ ಭದ್ರತಾ ದೃಷ್ಟಿಯಿಂದ ಸುಮಾರು 18 ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ಅಲಭ್ಯವಾಗಿತ್ತು. ಇದರಿಂದ ದಿನನಿತ್ಯ ಮೆಟ್ರೋ ಸಾರಿಗೆಯನ್ನೇ ಅವಲಂಬಿಸಿದ್ದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು.
ಈಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಕಾಕ್ರೋಚ್​ ಪಾರ್ಟಿ ಸಹ ತಮ್ಮ ಹೋರಾಟವನ್ನು ಹಿಂಪಡೆಯುವ ವಿಶ್ವಾಸವಿದ್ದು, ಆದ್ದರಿಂದ ಮೆಟ್ರೋ ಸೇವೆಗಳು ಪುನರಾರಂಭ ಕಾರಣಲಿವೆ ಎಂದು ಹೇಳಲಾಗುತ್ತಿದೆ.
ಅಂತಯೇ, ಮೆಟ್ರೋ ಆಡಳಿತ ಕೂಡ ರಾಜೀವ್​ ಚೌಕ್​, ಮಂಡಿ ಹೌಸ್​ ಹಾಗೂ ಕೇಂದ್ರ ಸಚಿವಾಲಯ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಿದೆ ಎಂದು, ಮೆಟ್ರೋ ಆಡಳಿತ ಮಾಹಿತಿ ಹಂಚಿಕೊಂಡಿದ್ದು, ಕೆಲವೇ ಸಮಯದಲ್ಲಿ ಸ್ಥಗಿತಗೊಂಡಿದ್ದ ಎಲ್ಲಾ ನಿಲ್ದಾಣಗಳಲ್ಲಿ ಸೇವೆ ಮೊದಲಿನಂತೆ ಆರಂಭವಾಗಲಿದೆ ಎಂಬ ಭರವಸೆ ನೀಡಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net