ಸೊಳ್ಳೆಗಳು ಮನುಷ್ಯನ ದೇಹದಲ್ಲಿ ರಕ್ತ ಹೀರೋಕೆ ಇದೇ ಕಾರಣ; ತಜ್ಞರಿಂದ ರಹಸ್ಯ ಬಯಲು..Mosquitoes Bite Research

Mosquitoes Bite Research
Mosquitoes Bite Research
Published on

ಪ್ರಮುಖ ಮುಖ್ಯಾಂಶಗಳು

  • ದೃಶ್ಯ ಹಾಗೂ ಮನುಷ್ಯನು ಹೊರಸೂಸು CO2 ಎರಡನ್ನೂ ಸಂಯೋಜಿಸಿ ಸೊಳ್ಳೆಗಳಿಂದ ದಾಳಿ
  • ಪ್ರತಿಯೊಂದು ಸೊಳ್ಳೆಗೂ ತಮ್ಮದೇ ಆದ ಸ್ವತಂತ್ರ್ಯ ನಿರ್ಧಾರವಿದೆ ಒಟ್ಟಾಗಿ ಏನನ್ನೂ ಮಾಡೋದಿಲ್ಲ
  • ಸೊಳ್ಳೆಗಳು ವ್ಯಕ್ತಿಯ ಬಟ್ಟೆಗಳಿಗೆ ಹೇಗೆ ಆಕರ್ಷಣೆಗೆ ಒಳಗಾಗುತ್ತವೆ ಎನ್ನುವುದು ವರದಿ ಮಾಡಲಾಗಿದೆ
Mosquitoes Choose Who To Bite: ಅಕಾಲಿಕ ಮಳೆಯಿಂದಾಗಿ ಹೂ ಕುಂಡ, ತೆಂಗಿನ ಚಿಪ್ಪು, ಶೂಗಳು, ಹೊಂಡ ಹೀಗೆ ಅಲ್ಲಲ್ಲಿ ನಿಂತ ನೀರು ಸೊಳ್ಳೆಗಳಿಗೆ ವಾಸ ಸ್ಥಾನ. ಸೂಜಿಗಿಂತಲೂ ಹೆಚ್ಚು ನೋವುಂಟು ಮಾಡುವ ಇವು,ರಾತ್ರಿ ನಿದ್ದೆ ಮಾಡೋಕು ಬಿಡೋಲ್ಲ. ಏನ್​ ಸೊಳ್ಳೆನಪ್ಪ ಎಂದು ಸೊಳ್ಳೆ ಬತ್ತಿ, ಮಸ್ಕಿಟೋ ಕಾಯ್ಲ್​​, ಧೂಪ ಅಬ್ಬಬ್ಬಾ ಒಂದಾ ಎರಡಾ ಏನೇ ಇಟ್ಟರು ಕಿವಿ ಬಳಿ ಗುಂಯ್​ಗುಡೋದಂತೂ ತಪ್ಪಲ್ಲ ನಿದ್ದೆನೂ ಬರೋಲ್ಲ. ಆದ್ರೆ ಹೊಸ ವಿಚಾರ ಎಂದರೆ, ಈ ಸೊಳ್ಳೆಗಳು ಸಿಕ್ಕ ಸಿಕ್ಕ ದೇಹವನ್ನು ಕಚ್ಚಿ ರಕ್ತ ಹೀರೋಲ್ವಂತೆ ಅವುಗಳ ಹಿಂದೆ ಒಂದು ವ್ಯವಸ್ಥಿತ ವೈಜ್ಞಾನಿಕ ತಂತ್ರವಿದೆಯಂತೆ ಹೀಗೆಂದು ತಜ್ಱರು ವರದಿಯೊಂದು ಹೊರಬಿದ್ದಿದೆ.
ಜಾರ್ಜಿಯಾ ಟೆಕ್ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವರದಿ ಪ್ರಕಾರ, ಸೊಳ್ಳೆಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳುವಾಗ ಸಿಕ್ಕ ಸಿಕ್ಕವರ ದೇಹವನ್ನು ಕಚ್ಚೋಕೆ ಹೋಗುವುದಿಲ್ಲ. ಸೊಳ್ಳೆಗಳು ಆಹಾರ ತಯಾರಿಸಿಕೊಳ್ಳಲು ಮನುಷ್ಯರನ್ನು ಹೇಗೆ ಹುಡುಕಿಕೊಳ್ಳುತ್ತವೆ ಮತ್ತು ದಾಳಿ ಮಾಡಲು ಹೇಗೆ ಯೋಜನೆ ರೂಪಿಸಿಕೊಳ್ಳುತ್ತವೆ ಎಂಬ ಕೂತೂಹಲಕಾರಿ ವಿಚಾರಗಳನ್ನು ವಿಜ್ಞಾನಿಗಳು ಬಯಲಿಗೆ ತಂದಿದ್ದಾರೆ.

ಅಧ್ಯಯನ ವರದಿಯಲ್ಲಿ ಏನಿದೆ?

Georgia Tech and the Massachusetts Institute of Technologyಯ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ನೂರಾರು ಸೊಳ್ಳೆಗಳನ್ನು ಟ್ರ್ಯಾಕ್​​ ಮಾಡಿ 20 ಮಿಲಿಯನ್​ಗೂ ಹೆಚ್ಚು ಡೇಟಾ ಪಾಯಿಂಟ್​ ಕಲೆಕ್ಟ್​ ಮಾಡಿ ವಿವರಣೆ ಕೊಟ್ಟಿದ್ದಾರೆ.
ಅದರ ಪ್ರಕಾರ, ಮುಖ್ಯವಾಗಿ ಡೆಂಗೆ ಜ್ವರ ಕಾಯಿಲೆ ತರುವ ಈಡಿಸ್​​ ಈಜಿಪ್ಟಿ ಹೆಣ್ಣು ಸೊಳ್ಳೆ ಮೇಲೆ ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ. ಜೊತೆಗೆ ಇದಕ್ಕೆ 3D ಅತಿಗೆಂಪು ಕ್ಯಾಮೆರಾಗಳನ್ನು ಸಂಶೋಧಕರು ಬಳಸಿದ್ದಾರೆ ಎನ್ನುವುದು ಉಲ್ಲೇಖಿಸಲಾಗಿದೆ.

ಬಾರ್​ಗೆ ಎಂಟ್ರಿ ಕೊಡೋದು ಈ ಕಾರಣಕ್ಕೆ

ಸಾಮಾನ್ಯವಾಗಿ ಮದ್ಯ ವ್ಯಸನಿಗಳು, ಒಬ್ಬರು ಹೋಗುವ ಬಾರ್​ ನೋಡಿ ಹೋಗೋದಿಲ್ಲ. ಅಲ್ಲಿನ ವಾತಾವರಣ, ಮ್ಯೂಸಿಕ್​, ಆಹಾರವನ್ನು ಭೇಟಿ ಕೊಡ್ತಾರೆ. ಇದರಲ್ಲಿ ಸೊಳ್ಳೆಗಳು ನಾವೇನು ಕಡಿಮೆ ಇಲ್ಲ ಎನ್ನುವಂತೆ ಕಿಕ್ಕಿರಿದ ಬಾರ್​ಗೆ ಮನುಷ್ಯರನ್ನು ಕಂಡು ಹೋಗೊದಿಲ್ಲವಂತೆ.
ಬದಲಿಗೆ ಬಾರ್​​ನಲ್ಲಿ ಕಾಣುವ ಜಗಮಗಿಸುವ ಲೈಟ್​ಗಳು, ಕೂಗಾಟ, ಬಾಟಲಿಗಳು ಹಾಗೂ ಮನುಷ್ಯ ಉಸಿರಾಡವಾಗ ಹೊರಬಿಡುವ ಕಾರ್ಬನ್ ಡೈಆಕ್ಸೈಡ್​ನ್ನೂ ಸಂಯೋಜಿಸಿಕೊಂಡು ಸೊಳ್ಳೆಗಳು ದಾಳಿ ಮಾಡುತ್ತವೆ ಎಂದು ಜಾರ್ಜಿಯಾ ಟೆಕ್ ಪ್ರೊಫೆಸರ್ ಡೇವಿಡ್ ಹೂ ಹೇಳಿದ್ದಾರೆ.
ಸಂಶೋಧಕರು ಮಾನವನ ವಿಚಾರದ ಮೇಲೆ ಅಧ್ಯಯನ ನಡೆಸಿದರು. ಆತನ ಬಟ್ಟೆಯ ಬಣ್ಣ ಬದಲಾಯಿಸಿದರು. ಆಗ ಆ ಮನುಷ್ಯನ ಸುತ್ತ ಸೊಳ್ಳೆಗಳು ಹೇಗೆ ಸುತ್ತುತ್ತಿದ್ದವು ಎನ್ನುವುದನ್ನು ವರದಿ ಮಾಡಿಕೊಂಡಿದ್ದರು. ಸೊಳ್ಳೆಗಳು ಒಂದನ್ನು ನೋಡಿ ಮತ್ತೊಂದು ಗುಂಪು ಸೇರುವುದಿಲ್ಲ. ಪ್ರತಿಯೊಂದು ಸೊಳ್ಳೆಯೂ ಸ್ವತಂತ್ರವಾಗಿ ಸಂಕೇತಗಳನ್ನು ಗ್ರಹಿಸಿ ಒಂದೇ ಸ್ಥಳಕ್ಕೆ ಬಂದು ಸೇರುತ್ತವೆ. ಅವು ಆಕಸ್ಮಿಕವಾಗಿ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇರುತ್ತವೆ ಎನ್ನಲಾಗಿದೆ.

ಡೆಂಗೆ, ಮಲೇರಿಯಾ ವಿರುದ್ಧ ಹೋರಾಡಲು ತಂತ್ರ

ಪ್ರತಿ ವರ್ಷ ವಿಶ್ವದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಸದ್ಯ ತಜ್ಱರ ಈ ಸಂಶೋಧನೆಯಿಂದಾಗಿ ಮಲೇರಿಯಾ, ಡೆಂಗಿ., ಝಕಾದಂತಹ ವೈರಸ್​ ಕಾಯಿಲೆಗಳಿಂದ ಸುಧಾರಿಸಿಕೊಳ್ಳಬಹುದಾಗಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net