ಉಪದೇಶ ಕೊಡುವ Food Animation ರೀಲ್ಸ್​ಗೆ ಅಡಿಕ್ಟ್​ ಆಗಿದ್ದೀರಾ?; ಈಗಲೇ ಎಚ್ಚೆತ್ತುಕೊಳ್ಳಿ.. AI Reels

Food AI Animation Reels
Food AI Animation Reels
Published on

ಪ್ರಮುಖ ಮುಖ್ಯಾಂಶಗಳು

  • ಎಐ ಆನಿಮೇಷನ್​ ವಿಡಿಯೋಗಳು ಮೆದುಳು ದುರ್ಬಲತೆಗೆ ಕಾರಣವಾಗುವ ಸಾಧ್ಯತೆ
  • ಕ್ರಿಯೇಟಿವ್​ ಎನಿಸಿದರೂ ನೋಡಿದ್ದೇ ನೋಡುವ ವಿಡಿಯೋಗಳು ಮೆದುಳಿಗೆ ಅಪಾಯಕಾರಿ
  • ಮೊಬೈಲ್​ ನೋಡುತ್ತಾ ಸಮಯ ವ್ಯರ್ಥ ಮಾಡುವುದುನ್ನು ತಪ್ಪಿಸೋದು ಹೇಗೆ?
AI Food Animation: ನಾನು ಗೋಬಿ ನನ್ನನ್ನು ತಿಂದರೆ, ನಿಮ್ಮ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ನಾನು ಪಾನಿಪುರಿ ಕರುಳಿಗೆ ತೊಂದರೆ ಕೊಡುತ್ತೇನೆ. ನಾನು ತುಳಸಿ ನನ್ನನ್ನು ನೀರಿನಲ್ಲಿ ಕುಡಿಯಿರಿ. ಹೀಗೆ ಇನ್​ಸ್ಟಾಗ್ರಾಂನಲ್ಲಿ ಪಿಜ್ಜಾ, ತರಹೇವಾರಿ ತರಕಾರಿಗಳು, ಧಾನ್ಯಗಳು ತಮ್ಮ ಬಗ್ಗೆ ತಾವೇ ಉಪದೇಶ ಕೊಡುವ Food Animation ರೀಲ್ಸ್​ಗಳು ಇತ್ತೀಚೆಗೆ ವೈರಲ್​ ಆಗುತ್ತಿವೆ.
ಇಡ್ಲಿ ಮತ್ತು ಸಾಂಬಾರು, ರಾಜ್ಮಾ ಮತ್ತು ಚವಾಲ್, ಮಿರ್ಚಿ ಮತ್ತು ರಸ್ಮಲೈ ಪ್ರೇಮಕತೆಗಳು ಒಂದು ಕಡೆಯಾದರೆ, ಕೋರ್ಟ್​ ಕಟೆಕಟೆಯಲ್ಲಿ ಕಡಲೆ ಬೀಜ ಹಾಗೂ ಬಾದಾಮಿ ನಿಂತಿರುವ ವಿಡಿಯೋಗಳು ಮತ್ತೊಂದು ಕಡೆ. ಇವುಗಳನ್ನು ನೋಡೋದು ಕಣ್ಣಿಗೆ, ಮನಸ್ಸಿಗೆ, ಮೆದುಳಿಗೆ ವ್ಯರ್ಥ ಎಂದು ಗೊತ್ತಿದ್ದರೂ ಸಹ ಎಂತ ಕ್ರಿಯೇಟಿವ್​ ಜನ ಇದ್ದಾರಪ್ಪ..ಏನೆಲ್ಲ ಮಾಡ್ತಾರೆ ಎಂದು ನೋಡಿದ್ದನ್ನೇ ನೋಡುತ್ತಾ ದಿನವೆಲ್ಲ ಕಳೆದು ಬಿಡುತ್ತೇವೆ.
ಇಂತಹ ತರ್ಕ ಹೀನ ಕಾಂಟೆಂಟ್​ಗಳು ಲಕ್ಷಾಂತರ ಜನರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಟ್ಟಿಹಾಕಿದೆ. ನೋಡಿದ್ದೆ ನೋಡುವ ರೀಲ್ಸ್​ಗಳಿಂದ ಮೆದುಳಿನ ಕೊಳೆತ(brain rot) ಅಂದರೆ ನಿಮ್ಮ ಮೆದುಳು ದುರ್ಬಲವಾಗುವ ಸಾಧ್ಯತೆ ಇದೆ. ಇವು ವ್ಯರ್ಥವಾದದ್ದು ಎಂದು ಗೊತ್ತಿದ್ದರೂ ಜನ ಸ್ಕ್ರಾಲ್ ಮಾಡೋದ್ಯಾಕೆ? ಇದರಿಂದ ಕಳೆದುಕೊಂಡಿದ್ದೆಷ್ಟು? ಎಚ್ಚೆತ್ತು ಕೊಳ್ಳೋದಾದ್ರು ಹೇಗೆ?

ಸೋಂಬೇರಿ ಮಾಡುವ ಫುಡ್​ ಆನಿಮೇಷನ್ ಮಾಯೆ?

ಎಐ ನಿಂದ ಕ್ರಿಯೇಟ್ ಮಾಡಿರುವ Food Animation ವಿಚಿತ್ರ​ ವಿಡಿಯೋಗಳು ನೋಡಲು ಕಣ್ಣಿಗೆ ಮನರಂಜಕ. ತಲೆಬುಡ ಇರದ ಈ ರೀಲ್ಸ್​ನ್ನು ಕುತೂಹಲಕ್ಕಾಗಿ ಜನರು ನೋಡಿ ನೆಚ್ಚಿಕೊಳ್ಳುತ್ತಿದ್ದಾರೆ. ಒಂದು ವಿಡಿಯೋ ನೋಡಿದರೆ ಸಾಕು ಇನ್​​ಸ್ಟಾಗ್ರಾಮ್​ ಅಲ್ಗಾರಿದಮ್​ ಮತ್ತೆ ಮತ್ತೆ ಅಂತದ್ದೇ ನೂರಾರು ಕಾಂಟೆಂಟ್ ಕಣ್ಣಿಗೆ ಕಾಣುವಂತೆ ಮಾಡುತ್ತವೆ.

ಆನಿಮೇಷನ್ ವಿಡಿಯೋಗಳು ಎಷ್ಟು ಅಪಾಯಕಾರಿ?

ಬೇಸರವಾದಾಗ ಮನರಂಜನೆಗಾಗಿ ಮೊಬೈಲ್​ ನೋಡ್ಬೇಕು ಅಥವಾ ಟಿವಿ ನೋಡ್ಬೇಕು ಅನ್ನೋದೇನೋ ಹೌದು. ಆದರೆ, ಆಹಾರದ ಬಗ್ಗೆ ಹಾಗೂ ಯಾವ ಡಿಟರ್ಜೆಂಟ್ ಬಳಸಿದರೆ ಬಟ್ಟೆ ಕ್ಲೀನ್​ ಆಗುತ್ತದೆ. ತಲೆಗೆ-ಮುಖಕ್ಕೆ ಏನು ಹಚ್ಚಿಕೊಳ್ಳಬೇಕು ಎನ್ನುವ ಕಾಂಟೆಂಟ್ ಇರುವ ಎಐ ನಿರ್ಮಿತ ಆನಿಮೇಷನ್​ ವಿಡಿಯೋಗಳು ಮನಸ್ಸಿಗೆ ಮನರಂಜನೆ ಕೊಡುವಂತದ್ದಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ತಜ್ಞರು ಹೇಳೋದೇನು?

ಇಂಡಿಯಾ ಟುಡೇ ವರದಿ ತಯಾರಿಸಿರುವ ಪ್ರಕಾರ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯ ಡಾ. ಅಸ್ತಿಕ್ ಜೋಶಿ ಅವರು ಹೇಳಿರುವುದು ಹೀಗೆ, ರೀಲ್ಸ್ ಮತ್ತು ಶಾರ್ಟ್​ನಲ್ಲಿ ಬರುವ ಪುನರಾವರ್ತಿತ ವಿಡಿಯೋಗಳು ಮೆದುಳಿನಲ್ಲಿ 'ಡೋಪಮೈನ್' ಬಿಡುಗಡೆ ಮಾಡುತ್ತದೆ. ಇದು ವಿಡಿಯೋಗಳಿಗೆ ಅಡಿಕ್ಟ್​ ಆಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಮನಸ್ಸು ಮತ್ತು ಮೆದುಳು ತೀರ ಆಯಾಸದಲ್ಲಿದ್ದಾಗ, ಅತಿ ಕಡಿಮೆ ಶ್ರಮ ಬೇಡುವ ಕ್ರಿಯೇಟಿವ್​ ಕಂಟೆಂಟ್​ಗಳನ್ನೇ ಬೇಡುತ್ತದೆ. ಹೀಗಾಗಿ ಅಡಿಕ್ಟ್​ ಆಗುತ್ತಾರೆ. ಥಟ್ಟನೇ ಫೋನ್​ ಬಳಕೆ ಇಳಿಕೆ ಮಾಡುವ ಬದಲಿಗೆ ಕ್ರಮೇಣವಾಗಿ ಕಡಿಮೆ ಮಾಡಿ ಎಂದು ಡಾ. ಶ್ರುತಿ ಶರ್ಮಾ ಅವರು ಹೇಳಿದ್ದಾರೆ.
ಪರಿಣಾಮವೇನು?
ಆನಿಮೇಷನ್​ ಕಂಟೆಂಟ್​ ವಿಡಿಯೋಗಳು ಎಷ್ಟು ಅಪಾಯಕಾರಿ ಮಟ್ಟಕ್ಕೆ ಮೆದುಳನ್ನು ದೂಡುತ್ತದೆ ಎಂದರೆ ಫೋನ್​ ಬಿಟ್ಟು ಇರಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಗೆ ತಳ್ಳುತ್ತದೆ. ಇದನ್ನು ನಡವಳಿಕೆಯ ವ್ಯಸನ (Behavioural Addiction) ಎಂದು ಕರೆಯುತ್ತಾರೆ. ಜೊತೆಗೆ, ವಿಡಿಯೋ ನೋಡುತ್ತಾ ಕುಳಿತರೆ ನಿದ್ರೆ, ಕೆಲಸ ಹಾಗೂ ಕೆಲವೊಮ್ಮೆ ಸಂಬಂಧವನ್ನೇ ಕಡಿದುಕೊಳ್ಳಲು ಇವು ನಾಂದಿಯಾಗಬಹುದು.
ಎಐನಿಂದ ಕ್ರಿಯೇಟ್ ಮಾಡುವ ಈ ಆನಿಮೇಷನ್​ ವಿಡಿಯೋಗಳನ್ನು ನೋಡದಿರಲು ಏನು ಮಾಡ್ಬೇಕು ಎಂದು ಯೋಚಿಸುತ್ತಿದ್ದರೆ ಹೀಗೆ ಮಾಡಿ:
  • ಇಷ್ಟೇ ಸಮಯ ಫೋನ್​ ನೋಡಬೇಕು ಎನ್ನುವ ನಿಯಮವನ್ನು ನಿಮಗೆ ನೀವೆ ಕೊಟ್ಟುಕೊಳ್ಳಿ
  • ನಿಮ್ಮ ಫೋನ್​ಗೆ ಬರುವ ಸಂದೇಶಗಳ ನೋಟಿಫಿಕೇಶನ್ ಆಫ್​ ಅಥವಾ ಸೈಲೆಂಟ್ ಮಾಡಿ
  • ಹೆಚ್ಚಿನ ಸಮಯವನ್ನು ರೀಲ್ಸ್ ನೋಡುವುದರಲ್ಲೇ ಕಳೆಯುವ ಬದಲಿಗೆ ಪುಸ್ತಕ ಓದುವುದು, ವ್ಯಾಯಾಮಕ್ಕೆ ಮೀಸಲಿಡಿ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net