ಇಡ್ಲಿ, ದೋಸೆ, ಚಿತ್ರನ್ನ ಅಲ್ಲ; ನೀವು ತಿನ್ನಲೇ ಬೇಕಾದ ದಕ್ಷಿಣ ಭಾರತದ ಫೇಮಸ್​ ಆಹಾರ ಇವು..South Indian Food

South Indian Famous Food:
South Indian Famous Food:
Published on
South Indian Famous Food: ದಕ್ಷಿಣ ಭಾರತವೂ ತನ್ನದೇ ಆದ ಮಸಾಲಭರಿತ ತಿಂಡಿ, ಆಹಾರ ಖಾದ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ಬೆಳಗ್ಗಿನ ಬ್ರೇಕ್​ಫಾಸ್ಟ್​ಗೆ ಚಿತ್ರನ್ನ, ದೋಸೆ, ಇಡ್ಲಿ, ಉಪ್ಪಿಟ್ಟು ಆದರೆ, ಮಧ್ಯಾಹ್ನದ ಊಟ ಮುದ್ದೆ, ಅನ್ನ, ಸಾರು, ರೊಟ್ಟಿ ಹಾಗೂ ರಾತ್ರಿಯ ಆಹಾರವೇ ಮತ್ತೊಂದು ವಿಧಾನದಲ್ಲಿ ಸೇವನೆ ಮಾಡಲಾಗುತ್ತದೆ. ಇಲ್ಲಿ ಬಳಕೆ ಮಾಡುವ ಚಕ್ಕೆ, ಲವಂಗ, ಪಲಾವ್​ ಎಲೆಗಳು, ಹುಣಸೆ, ತೆಂಗು, ಮೆಂತ್ಯೆ, ಧನಿಯಾ ಆರೋಗ್ಯದ ಗಿಡಮೂಲಿಕೆ ಇದ್ದಂತೆ.
ಬಿಸಿಬೇಳೆ ಬಾತ್, ಬಿರಿಯಾನಿ, ರಸಂ, ಕಾಳು ಭರಿತ ಸಾರಿನ ರುಚಿ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳು ತಮ್ಮದೇ ಶೈಲಿಯ ಆಹಾರ ತಯಾರಿಕೆಯಲ್ಲಿ ಫೇಮಸ್ಸು. ದೋಸೆ, ಇಡ್ಲಿ, ಚಿತ್ರನ್ನ, ಪಲಾವ್​ ಬಿಟ್ಟು ನೀವೇನಾದರೂ ದಕ್ಷಿಣ ಭಾರತದಲ್ಲಿ ಫೇಮಸ್​​​ ಫುಡ್​​​ ತಿನ್ನಲು ಬಯಸುತ್ತಿದ್ದರೆ ಇಲ್ಲಿದೆ ಕೆಲವು ಸಲಹೆ.

ಮುದ್ದೆ ಸಾರು

ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ಎನ್ನುವ ಗಾದೆ ಮಾತಿದೆ ಅದರಂತೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ದಕ್ಷಿಣ ಭಾಗದಲ್ಲಿರುವವರು ಹೆಚ್ಚಾಗಿ ಸೇವಿಸುವುದು ರಾಗಿ ಮುದ್ದೆ. ಇದು ಸಸ್ಯಹಾರಕ್ಕೂ, ಮಾಂಸಹಾರ ಎರಡಕ್ಕೂ ಸೈ ಎನಿಸಿಕೊಳ್ಳುವ ಕ್ಯಾಲ್ಸಿಯಂ, ಫೈಬರ್ ಹಾಗೂ ಪ್ರೊಟೀನ್​ಯುಕ್ತ ಆಹಾರ. ಮಧುಮೇಹ ನಿಯಂತ್ರಣಕ್ಕೆ ಇದು ಸಹಕಾರಿ ಎನ್ನುತ್ತಾರೆ ವೈದ್ಯರು.

ಕೇರಳದ ಪ್ರಸಿದ್ದಿ ಆಹಾರ ಅಪ್ಪಂ

ಅಪ್ಪಂ ಅನ್ನು ಅನ್ನದಿಂದ ತಯಾರಿಸಲಾಗುತ್ತದೆ. ಪ್ಯಾನ್​ಕೇಕ್​ನಂತೆ ಕಾಣುವ ಇದಕ್ಕೆ ತೆಂಗಿನಕಾಯಿ ಚಟ್ನಿಯನ್ನು ಜೊತೆಗೆ ಬಡಿಸಲಾಗುತ್ತದೆ. ಇದಕ್ಕೆ ಕೋಳಿ ಸಾರು, ಮಟನ್, ತರಕಾರಿ ಪಲ್ಯವೂ ಹೇಳಿ ಮಾಡಿಸಿದ ಜೋಡಿ.

ಇಡಿಯಪ್ಪಂ

ಮೃದುವಾದ ಅಕ್ಕಿ ಹಿಟ್ಟನ್ನು ನೂಡಲ್ಸ್​ನಂತೆ ತಯಾರಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ಒತ್ತು ಶಾವಿಗೆ ಎಂತಲೂ ಕರೆಯಾಲಾಗುತ್ತದೆ. ಬೆಂಗಳೂರಿಗೆ ವಲಸೆ ಬಂದಿರುವ ಆಂಧ್ರ ಜನರು ಇದಕ್ಕೆ ಗಸಗಸೆ ಅಥವಾ ಬೇಳೆ ಪಾಯಸವನ್ನು ತಿನ್ನುವುದು ವಾಡಿಕೆ. ಕೇರಳದಲ್ಲಿ ಇಡಿಯಪ್ಪಂ ಎಂದು ಕರೆಸಿಕೊಳ್ಳುವ ಇದನ್ನು ಆವಿಯಲ್ಲಿ ಬೇಯಿಸಲಾಗುತ್ತದೆ. ಈ ಇಡಿಯಪ್ಪಂ ಅನ್ನು ಚಟ್ನಿ, ಮೊಟ್ಟೆ ಕರಿಯೊಂದಿಗೆ ತಿನ್ನಬಹುದಾಗಿದೆ.

ಕೇರಳದ ಪುಟ್ಟು

ಅನ್ನ ಮತ್ತು ತೆಂಗಿನಕಾಯಿಯನ್ನು ಒಂದು ಉದ್ದದ್ದ ಕೊಳವೆಯಾಕಾರದ ಸಿಲಿಂಡರ್​ನಂತೆ ಕಾಣುವ ಸ್ಟೀಲ್​​ ಸಾಧನಕ್ಕೆ ಹಾಕಿ ಬೇಯಿಸಲಾಗುತ್ತದೆ. ಕಡಲ ಮೀನು, ಮೊಟ್ಟೆ ಸಾರಿನೊಂದಿಗೆ ತಿನ್ನಬಹುದು.

ಇನ್ಯಾವ ಆಹಾರ ಇಲ್ಲಿ ಫೇಮಸ್ಸು?

ಹಸಿವನ್ನು ನೀಗಿಸುವ ಮತ್ತು ತಿಂದರೆ ಇನ್ನಷ್ಷು ತಿನ್ನುವಂತೆ ಮಾಡುವ ಆಹಾರ ಉತ್ತಪ್ಪಮ್ ತರಕಾರಿಗಳೊಂದಿಗೆ ಅಲಂಕರಿಸಲ್ಪಟ್ಟ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾದ ಖಾರದ ಪ್ಯಾನ್‌ಕೇಕ್ ಇದಾಗಿದೆ. ಬೆಲ್ಲ ಮತ್ತು ಅನ್ನ ಸೇರಿಸಿ ಮಾಡುವುದು ಸಿಹಿ ಪೊಂಗಲ್​ ಇದು ಸಹ ಇಲ್ಲಿನ ಪ್ರಖ್ಯಾತಿ ಖಾದ್ಯ. ಕಾಂಕ್ರಿಟ್​ ಎಂದು ಕರೆಸಿಕೊಳ್ಳು ಉಪ್ಪಿಟ್ಟು, ಉದ್ದಿನ ಬೇಳೆಯಿಂದ ಮಾಡಲಾಗುವ ತೂತು ವಡೆ, ಕಡಲೆ ಬೇಳೆಯ ವಡೆ ಇಲ್ಲಿ ಹೆಚ್ಚಾಗಿ ಇಷ್ಟಪಟ್ಟು ನೆಚ್ಚಿಕೊಂಡು ತಿನ್ನುವ ಆಹಾರ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಹಾಸನ ಮತ್ತು ಚಿಕ್ಕಮಗಳೂರು ಭಾಗದ ಅಕ್ಕಿ ರೊಟ್ಟಿ, ಕಡುಬು ಸಹ ಮೊದಲಬಾರಿಗೆ ಟೇಸ್ಟ್​ ಮಾಡಬಹುದಾದ ಆಹಾರವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net