ಹೆಲ್ತಿ ಅಂಡ್ ಟೇಸ್ಟಿ: ಎಣ್ಣೆ ಕಡಿಮೆ ಬಳಸಿ 'ತವಾ ಫಿಶ್' ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ Fish Recipes

  Fish Recipes (ಸಾಂದರ್ಭಿಕ ಚಿತ್ರ)
Fish Recipes (ಸಾಂದರ್ಭಿಕ ಚಿತ್ರ)
Published on
Fish Recipes: ಸಂಡೇ ಬಂದರೆ ಸಾಕು ನಾನ್​ವೆಜ್​ ಪ್ರಿಯರಿಗೆ ಹಬ್ಬ. ರುಚಿಕರವಾದ ಆಹಾರವನ್ನು ಸವಿಯುವ ಸಲುವಾಗಿ ಎಷ್ಟೋ ದೂರ ಪ್ರಯಾಣ ನಡೆಸುವುದನ್ನು ನೋಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಫಿಶ್​ನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಇಂದು ನಾವು ಕಡಿಮೆ ಎಣ್ಣೆಯಲ್ಲಿ ತಯಾರಿಸಬಹುದಾದ, ಆರೋಗ್ಯಕರ ಮತ್ತು ರುಚಿಕರವಾದ 'ತವಾ ಫಿಶ್ ಫ್ರೈ' ,ಮಾಡಿವುದನ್ನು ಹೇಳಿಕೊಡಲಿದ್ದೇವೆ. 

ಬೇಕಾಗುವ ಸಾಮಾಗ್ರಿಗಳು

* 1/2 ಕೆಜಿ ಮೀನು
2 ಚಮಚ ಕೆಂಪು ಮೆಣಸಿನ ಪುಡಿ
ಅರ್ಧ ಚಮಚ ಅರಿಶಿನ ಪುಡಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 
ಅರ್ಧ ಚಮಚ ಗರಂ ಮಸಾಲ
1 ಚಮಚ ಲಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ  ಕರಿಬೇವು
2-3 ಚಮಚ ಕೊಬ್ಬರಿ ಎಣ್ಣೆ 

ಮಾಡುವ ವಿಧಾನ

ಒಂದು ಬೌಲ್‌ನಲ್ಲಿ ಮೆಣಸಿನ ಪುಡಿ, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಲಿಂಬೆ ರಸ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ನಂತರ ತೊಳೆದಿಟ್ಟಿರುವ ಮೀನಿನ ತುಂಡುಗಳಿಗೆ ಮಸಾಲೆಯನ್ನು ಎರಡೂ ಬದಿ ಸಮನಾಗಿ ಹಚ್ಚಿ. ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ಮಸಾಲೆಯಲ್ಲಿ ನೆನೆಯಲು ಬಿಡಿ. 
ಇದಾದ ಬಳಿಕ ನಾನ್-ಸ್ಟಿಕ್ ಅಥವಾ ಕಬ್ಬಿಣದ ತವಾವನ್ನು ಒಲೆಯ ಮೇಲಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಸವರಿ ಬಿಸಿ ಮಾಡಿಕೊಂಡು ಮಸಾಲೆ ಹಚ್ಚಿದ ಮೀನಿನ ತುಂಡುಗಳನ್ನು ಒಂದೊಂದಾಗಿ ಇರಿಸಿ. ಮೇಲೆ ಸ್ವಲ್ಪ ಕರಿಬೇವು ಉದುರಿಸಿ.
ಕಡಿಮೆ ಉರಿಯಲ್ಲಿ ಮೀನನ್ನು ಎರಡೂ ಬದಿ ತಲಾ 5-7 ನಿಮಿಷಗಳ ಕಾಲ ಅಥವಾ ಮೀನು ಕೆಂಪಗಾಗಿ ಬೇಯುವವರೆಗೆ ಫ್ರೈ ಮಾಡಿ. ಬಿಸಿಯಾದ ತವಾ ಫಿಶ್​ ಈಗ ಸವಿಯಲು ಸಿದ್ಧ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net