ತಟ್ಟೆಯಲ್ಲಿ ಪಾನಿಪುರಿ..ಕೈಯಲ್ಲಿ ಐಫೋನ್​: ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಗೋಲ್ಗಪ್ಪ ವ್ಯಾಪಾರಿಯ ವಿಡಿಯೋ!Social Media

ಐಫೋನ್​ ಹಿಡಿದು ಪಾನಿಪುರಿ ಮಾರುತ್ತಿರುವ ವ್ಯಕ್ತಿ
ಐಫೋನ್​ ಹಿಡಿದು ಪಾನಿಪುರಿ ಮಾರುತ್ತಿರುವ ವ್ಯಕ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಐಫೋನ್​ ಹಿಡಿದು ಪಾನಿಪುರಿ ಮಾರುತ್ತಿರುವ ವ್ಯಪಾರಿ
  • ಬಿಹಾರದ ಪಾಟ್ನಾದಲ್ಲಿ ಸೆರೆಯಾದ ದೃಶ್ಯ
  • ನಾವು ಕೆಲ ಬಿಟ್ಟು ಪಾನಿಪುರಿ ಮಾರುವುದು ಲೇಸೆಂದ ನೆಟ್ಟಿಗರು
ಪಾಟ್ನಾ: ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಎನ್ನುವುದು ಕೇವಲ ಫೋನ್ ಅಲ್ಲ, ಅದೊಂದು ಸ್ಟೇಟಸ್ ಸಿಂಬಲಾಗಿ ಬದಲಾಗಿದೆ. ಅದರಲ್ಲೂ ಕೈಯಲ್ಲಿ ಒಂದು ಐಫೋನ್ ಇದ್ದರೆ ಅದರ ಖದರೇ ಬೇರೆ.
ಸಾಮಾನ್ಯವಾಗಿ ದೊಡ್ಡ ಉದ್ಯಮಿಗಳು ಅಥವಾ ಸೆಲೆಬ್ರಿಟಿಗಳ ಕೈಯಲ್ಲಿ ಕಾಣಸಿಗುವ ಲೇಟೆಸ್ಟ್ ಮಾಡೆಲ್‌ನ ಐಫೋನ್, ಬೀದಿಬದಿಯ ಪಾನಿಪುರಿ ಮಾರಾಟಗಾರನ ಕೈಯಲ್ಲಿದ್ದರೆ ಹೇಗಿರುತ್ತದೆ?
ಸದ್ಯ ಪಾಟ್ನಾದ ಬೀದಿಗಳಲ್ಲಿ ಇಂತಹದ್ದೇ ಒಂದು ದೃಶ್ಯ ಕಂಡುಬಂದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಪಾನಿಪುರಿಗಿಂತ ಫೋನ್ ಮೇಲೆಯೇ ಜನರ ಕಣ್ಣು!

ಸಾಮಾನ್ಯವಾಗಿ ಪಾನಿಪುರಿ ಸ್ಟಾಲ್ ಮುಂದೆ ಹೋದರೆ ನಮ್ಮ ಗಮನ ಮಸಾಲೆಯುಕ್ತ ಪಾನಿ ಮತ್ತು ಗರಿಗರಿಯಾದ ಪುರಿಗಳ ಮೇಲಿರುತ್ತದೆ. ಆದರೆ ಪಾಟ್ನಾ ಜಂಕ್ಷನ್ ಬಳಿಯ ಶಿವ್ಜಿ ಬನಾರಸಿ ಗೋಲ್ಗಪ್ಪ ಸ್ಟಾಲ್‌ಗೆ ಹೋದರೆ ನಿಮ್ಮ ಕಣ್ಣುಗಳು ಅಲ್ಲಿನ ಮಾಲೀಕನ ಕೈಯಲ್ಲಿರುವ ಫೋನ್ ಮೇಲೆ ಹೋಗುವುದು ಗ್ಯಾರಂಟಿ. ಈ ವ್ಯಕ್ತಿ ಸುಮಾರು ಲಕ್ಷ ಬೆಲೆಯ ಬ್ರ್ಯಾಂಡ್ ನ್ಯೂ ಐಫೋನ್ 17 ಪ್ರೊ ಮ್ಯಾಕ್ಸ್ ಬಳಸುತ್ತಿದ್ದಾರೆ.

ವ್ಲಾಗರ್ ಕಂಡು ಹಿಡಿದ ಸೀಕ್ರೆಟ್

ಬಿಹಾರಿ ಅಡ್ಡಾ ವಾಲಾ ಎಂಬ ಜನಪ್ರಿಯ ಫುಡ್ ವ್ಲಾಗರ್ ಈ ವಿಶಿಷ್ಟ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೊದಲ್ಲಿ ವ್ಲಾಗರ್ ಫೋನ್ ಅನ್ನು ಹತ್ತಿರದಿಂದ ತೋರಿಸಿದಾಗ, ಅದರ ಇಂಟರ್ಫೇಸ್ ಮತ್ತು ಕ್ಯಾಮೆರಾ ಮಾಡ್ಯೂಲ್ ಅಪ್ಪಟ ಐಫೋನ್ ಎಂಬುದನ್ನು ಖಚಿತಪಡಿಸಿದೆ.
ಗ್ರಾಹಕರಿಗೆ ಗೋಲ್ಗಪ್ಪ ನೀಡುತ್ತಲೇ ಆತ ಫೋನ್‌ನಲ್ಲಿ ಡಿಜಿಟಲ್ ಪೇಮೆಂಟ್ ಚೆಕ್ ಮಾಡುವುದನ್ನು ನೋಡಿ ವ್ಲಾಗರ್ ಕೂಡ ಅಚ್ಚರಿಗೊಂಡಿದ್ದಾರೆ. ಇಷ್ಟು ದುಬಾರಿ ಫೋನ್ ಯಾಕೆ? ಎಂದು ಕೇಳಿದ್ದಕ್ಕೆ, ಸರ್, ಈಗ ಎಲ್ಲವೂ ಡಿಜಿಟಲ್ ಆಗಿದೆ. ಪೇಮೆಂಟ್ ರಿಸೀವ್ ಮಾಡಲು ಮತ್ತು ವ್ಯಾಪಾರಕ್ಕೆ ಒಳ್ಳೆಯ ಫೋನ್ ಬೇಕಲ್ಲವೇ? ಎಂದು ಆ ಮಾರಾಟಗಾರ ಉತ್ತರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಕಮೆಂಟ್ಸ್!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫನ್ನಿ ಕಮೆಂಟ್ಸ್‌ಗಳ ಮಳೆ ಸುರಿಸುತ್ತಿದ್ದಾರೆ. ನಾನು ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಬಿಟ್ಟು ಗೋಲ್ಗಪ್ಪ ಮಾರಾಟಕ್ಕೆ ಹೋಗುತ್ತಿದ್ದೇನೆ, ಯಾವುದಾದರೂ ಖಾಲಿ ಜಾಗ ಇದ್ದರೆ ಹೇಳಿ!" ಎಂದು ಒಬ್ಬರು ಬರೆದಿದ್ದಾರೆ. ಇದು ನವ ಭಾರತದ ಶಕ್ತಿ; ಇಲ್ಲಿ ವೃತ್ತಿ ಯಾವುದಾದರೂ ತಂತ್ರಜ್ಞಾನ ಎಲ್ಲರ ಕೈಯಲ್ಲಿದೆ ಎಂದು ಇನ್ನೊಬ್ಬರು ಶ್ಲಾಘಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net