ಮದುವೆ ಮಂಟಪದಲ್ಲಿ ಬೆಂಕಿಮಳೆ ಸುರಿಸಿದ ಅಜ್ಜಿ: ವೈರಲ್​ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಶಾಕ್​! Viral Video

ಮಂಟಪದ ಮೇಲೆ ಬೆಂಕಿ ಮಳೆ ಸುರಿಸುತ್ತಿರುವ ಅಜ್ಜಿ
ಮಂಟಪದ ಮೇಲೆ ಬೆಂಕಿ ಮಳೆ ಸುರಿಸುತ್ತಿರುವ ಅಜ್ಜಿ
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಮನೆಯಲ್ಲಿ ಅಜ್ಜಿ ಹೈಡ್ರಾಮಾ
  • ವರನ ತಲೆಗೆ ಬೆಂಕಿ ಗನ್​ ಹಿಡಿದ ಅಜ್ಜಿ
  • ಮಂಟಪದ ಮೇಲೆ ಬೆಂಕಿ ಮಳೆ ಸುರಿಸಿದ ಅಜ್ಜಿ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​
Viral Video: ಮದುವೆ ಅಂದಮೇಲೆ ಅಲ್ಲಿ ಹಿರಿಯರ ಆಶೀರ್ವಾದ ಇರಲೇಬೇಕು. ಆದರೆ ಇಲ್ಲೊಬ್ಬ ಅಜ್ಜಿ ಹರಿಸಿದ ಆಶೀರ್ವಾದದ ಮಳೆ ಕಂಡು ಮದುವೆಗೆ ಬಂದವರೆಲ್ಲಾ ಬೆಚ್ಚಿಬಿದ್ದಿದ್ದಾರೆ. ವರನ ತಲೆ ಪಕ್ಕದಲ್ಲೇ ಬೆಂಕಿ ಕಿಡಿಗಳು ಚಿಮ್ಮಿದರೂ ಜಗ್ಗದ ಅಜ್ಜಿಯ ಸಾಹಸದ ವಿಡಿಯೋ (Viral Video) ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಮದುಮಗ ಮತ್ತು ಮದುಮಗಳು ಹೂವಿನ ಮಾಲೆ ಬದಲಿಸಿಕೊಳ್ಳುವ ಶಾಸ್ತ್ರದಲ್ಲಿ ನಿರತರಾಗಿದ್ದರು. ಈ ಖುಷಿಯ ಕ್ಷಣದಲ್ಲಿ ವರನ ಅಜ್ಜಿಗೂ ಎಲ್ಲಿಲ್ಲದ ಸಂಭ್ರಮ. ಕೈಯಲ್ಲೊಂದು ಪೈರೋಟೆಕ್ನಿಕ್ ಪಟಾಕಿ ಗನ್ (Pyrotechnic Gun) ಹಿಡಿದು ಸಂಭ್ರಮಿಸಲು ಮುಂದಾದರು. ಆದರೆ ಆ ಸಂಭ್ರಮ ಒಂದು ಕ್ಷಣ ಎಲ್ಲರ ಎದೆಬಡಿತ ಹೆಚ್ಚಿಸುವಂತೆ ಮಾಡಿದೆ.

ವರನ ಮೇಲೆ ಅಜ್ಜಿ ಫೈರಿಂಗ್​!

ಅಜ್ಜಿ ಕೈಯಲ್ಲಿ ಗನ್ ಹಿಡಿದು ಟ್ರಿಗರ್ ಎಳೆಯುತ್ತಿದ್ದಂತೆ ಕಿಡಿಗಳು ವರನ ಮುಖ ಮತ್ತು ಕೂದಲಿನ ಹತ್ತಿರವೇ ಸಿಡಿಯಲು ಆರಂಭಿಸಿದವು. ಕಿಡಿಗಳ ಸುರಿಮಳೆ ಎಷ್ಟಿತ್ತೆಂದರೆ, ವರನ ಕೂದಲು ಸುಟ್ಟು ಹೋಗುವುದರಲ್ಲಿತ್ತು. ಅಷ್ಟಕ್ಕೇ ನಿಲ್ಲದ ಅಜ್ಜಿ, ಉತ್ಸಾಹದಲ್ಲಿ ಪದೇ ಪದೇ ಟ್ರಿಗರ್ ಎಳೆಯುತ್ತಾ ಇಡೀ ಕಲ್ಯಾಣ ಮಂಟಪದಾದ್ಯಂತ ಕಿಡಿಗಳನ್ನು ಹಾರಿಸಿದರು. ಪಕ್ಕದಲ್ಲಿದ್ದ ಅತಿಥಿಗಳು ಈ ಬೆಂಕಿಯ ಮಳೆಯಿಂದ ತಪ್ಪಿಸಿಕೊಳ್ಳಲು ವೇದಿಕೆಯಿಂದ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಮೆಂಟ್​ಗಳ ಸುರಿಮಳೆ

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ಅಜ್ಜಿ ಈ ಮದುವೆಯನ್ನು ಅವಿಸ್ಮರಣೀಯವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬರೆದರೆ, ಸದ್ಯ ಮದುಮಗನ ತಲೆ ಕೂದಲು ಬೋಳಾಗಲಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ಸಂಭ್ರಮದ ನಡುವೆ ಎಚ್ಚರಿಕೆ ಇರಲಿ

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಮದುವೆ ಮನೆಗಳಲ್ಲಿ ಪಾಲಿಯೆಸ್ಟರ್ ಬಟ್ಟೆಗಳ ಬಳಕೆ ಹೆಚ್ಚಿರುವುದರಿಂದ ಇಂತಹ ಪಟಾಕಿ ಗನ್‌ಗಳು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ತಮಾಷೆಗಾಗಿ ಇಂತಹ ಅಪಾಯಕಾರಿ ಕೆಲಸ ಮಾಡಬೇಡಿ ಎಂಬ ಕಿವಿಮಾತು ಕಮೆಂಟ್ ಬಾಕ್ಸ್​ನಲ್ಲಿ ​ಕೇಳಿಬಂದಿದೆ.
ಒಟ್ಟಿನಲ್ಲಿ ಅಜ್ಜಿಯ ಈ ಸಾಹಸದಿಂದಾಗಿ ವರನ ಮದುವೆ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವಂತದ್ದೂ ಆಯಿತು, ಇತ್ತ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಕೂಡ ಆಯಿತು ಎನ್ನುವುದು ನೆಟ್ಟಿಗರ ಅಂಬೊಣವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net