

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಹಿರಿಯರೊಬ್ಬರು ರಸ್ತೆಯ ಮಧ್ಯದಲ್ಲಿ ನಿಂತಿರುವುದನ್ನು ನೋಡಬಹುದು. ಅವರ ಮುಂದೆ ದೂರದರ್ಶಕವಿದ್ದು, ಜನರು ಸಾಲಾಗಿ ನಿಂತಿದ್ದಾರೆ. ಅಂದಹಾಗೆ ಈ ಜನರು ದೂರದರ್ಶಕದ ಸಹಾಯದಿಂದ ಶನಿ ಗ್ರಹವನ್ನು ನೋಡಲು ಇಲ್ಲಿ ಸಾಲಾಗಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನರು ಗ್ರಹವನ್ನು ನೋಡಲು ಬಹಳ ಆಸಕ್ತಿ ಹೊಂದಿದ್ದರು.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ goodnews_movement ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ''ಮಾನವೀಯತೆ: ಈ ವ್ಯಕ್ತಿ ನಗರದ ಬೀದಿಯಲ್ಲಿ ದೂರದರ್ಶಕವನ್ನಿಟ್ಟಿದ್ದು, ಇದರಿಂದ ಇತರ ಜನರು ಶನಿಯ ಅದ್ಭುತ ನೋಟವನ್ನು ನೋಡಬಹುದು. ಅವರಂತೆ ಆನಂದಿಸಬಹುದು. ತುಂಬಾ ಇಷ್ಟವಾಯಿತು. ಸಂತೋಷವನ್ನು ಹಂಚಿಕೊಳ್ಳಿ. ಲಕ್ಷಾಂತರ ಮಂದಿ ವಿಡಿಯೋ ನೋಡಿದ್ದಾರೆ. ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ''. ಎಂದು ವಿಡಿಯೋಗೆ ಶೀರ್ಷಿಕೆ ಕೊಟ್ಟಿದ್ದಾರೆ.
ಬಳಕೆದಾರರು ಹೇಳಿದ್ದೇನು? ವಿಡಿಯೋ ಕುರಿತು ಕಾಮೆಂಟ್ ಮಾಡಿದ ಬಳಕೆದಾರರು, 'ನಾನು ಸಂತೋಷದಿಂದ ಕಾದು ನೋಡಲು ಬಯಸುತ್ತೇನೆ', 'ನಾನು ಶನಿ ಗ್ರಹವನ್ನು ದೂರದರ್ಶಕದಲ್ಲಿ ನೋಡಿದ್ದೇನೆ, ಅದನ್ನು ನೋಡುವುದು ಅದ್ಭುತವಾಗಿದೆ! ನೀವು ಅದರ ಸುತ್ತಲೂ ಉಂಗುರವನ್ನು ನೋಡಬಹುದು' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ 'ಅವರ ಬಳಿ ದೂರದರ್ಶಕವಿದೆ, ನಮಗೆ ಸಹಾಯ ಮಾಡಲು ಇಂತಹ ಇನ್ನಷ್ಟು ಜನರು ಬೇಕು. ಆದ್ದರಿಂದ ಇಂತಹವರನ್ನು ಪ್ರಶಂಸಿಸಿ', 'ನೀವು ಶನಿಗ್ರಹವನ್ನು ದೂರದರ್ಶಕದಿಂದ ನೋಡಿಲ್ಲದಿದ್ದರೆ, ಆ ಸಾಲಿನಲ್ಲಿ ನಿಂತುಕೊಳ್ಳಿ' ಎಂದೆಲ್ಲಾ ಬರೆದಿದ್ದಾರೆ.