

Uttar pradesh | ಈ ಹೃದಯಾಘಾತ ಎಂಬ ಯಮರೂಪಿ ಕಾಯಿಲೆ ಯಾವಾಗ ಮನುಷ್ಯನನ್ನು ಕೊಂದುಹಾಕುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಅಂದಹಾಗೆ ದಂಪತಿಗಳಿಬ್ಬರೂ ಕೂಡ ತಮ್ಮ 25 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವಾಗ ಪತಿಗೆ ಏಕಾಏಕಿ ಹೃದಯಾಘಾತ ಸಂಭವಿಸಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಬರೇಲಿಯಲ್ಲಿ. 50 ವರ್ಷದ ಉದ್ಯಮಿ ವಾಸಿಮ್ ಸರ್ವತ್ ಮತ್ತು ಅವರ ಪತ್ನಿ ಫರಾ ಅವರು ಪಿಲಿಭಿತ್ ಬೈಪಾಸ್ ರಸ್ತೆಯ ಒಂದು ಪಾರ್ಟಿಹಾಲ್ನಲ್ಲಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಾ ಇದ್ರು. ಅವರು ತಮ್ಮ ಕುಟುಂಬ ಸದಸ್ಯರೆಲ್ಲರ ಜೊತೆ ಸಂತೋಷದಿಂದ ಸಂಭ್ರಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪತಿ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ಇವರೆಲ್ಲರೂ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ವಾಸಿಮ್, ಅನಿರೀಕ್ಷಿತವಾಗಿ ಕುಸಿದು ಬಿದ್ದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಅವರು ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ನೋಡಿದ ನೆಟ್ಟಗರು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿದ್ದಾರೆ. ಅನಾರೋಗ್ಯಕರ ಜೀವನಶೈಲಿ ಮತ್ತು ಹೆಚ್ಚಿನ ಒತ್ತಡದ ಮಟ್ಟದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ತುಂಬಾ ಸಾಮಾನ್ಯವಾಗಿ ಕಂಡು ಬರುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಈಗ ಸಾಮಾನ್ಯವಾಗುತ್ತಿದೆ ಮತ್ತು ಇದು ಭಯಾನಕವಾಗಿದೆ ಜೀವನವು ಅನಿರೀಕ್ಷಿತ ಎಂದು ಬರೆದಿದ್ದಾರೆ.
(ಏಜೆನ್ಸೀಸ್)