ಹಕ್ಕಿ ಜ್ವರದಂತಹ ವೈರಸ್‌ ಭೀತಿ ಎದುರಿಸುವುದೇಗೆ? ಸೋಂಕಿಗೆ ಒಳಗಾಗದಿರಲು ಮಾಂಸವನ್ನು ಹೇಗೆ ಬೇಯಿಸಬೇಕು; Chicken

chicken
Published on

Chicken : ಮಾಂಸಹಾರ ಪ್ರಿಯರು ಹೆಚ್ಚಾಗಿ ಕೋಳಿ ಮಾಂಸವನ್ನ ಇಷ್ಟ ಪಡುತ್ತಾರೆ. ಆದರೆ ಇದೇ ಕೋಳಿಗಳಿಂದ ಹೆಚ್ಚಾಗಿ ವೈರಸ್​ ಹರಡುವುದನ್ನು ನೋಡಿರುತ್ತೇವೆ. ಇದರಿಂದಾಗಿ ಹಸಿ ಮಾಂಸ ತಿನ್ನುವುದರಿಂದ ಆ ಕೋಳಿ ಅಥವಾ ಪ್ರಾಣಿಯಲ್ಲಿರುವ ರೋಗಗಳು ಸುಲಭವಾಗಿ ಹರಡಬಹುದು. ಆದರೆ ಬೇಯಿಸಿದ ಮಾಂಸವು ಅಂತಹ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಮಾಂಸವನ್ನು ತಿನ್ನುವ ಮೊದಲು ಯಾವ ತಾಪಮಾನದಲ್ಲಿ ಬೇಯಿಸಬೇಕು? ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಮಾಂಸವನ್ನು ಬೇಯಿಸಲು ಉತ್ತಮ ಮಾರ್ಗ ಯಾವುದು ಎಂಬುದನ್ನು ತಿಳಿಯೋಣ.

ಮಾಂಸ ಬೇಯಿಸುವುದು ಹೇಗೆ?

ಮಾಂಸ ಅಥವಾ ಇತರ ಭಕ್ಷ್ಯಗಳನ್ನು ಹೆಚ್ಚಿನ ತಾಪಮಾನದಲ್ಲಿ ಸಂಪೂರ್ಣವಾಗಿ ಬೇಯಿಸಿದ ನಂತರವೇ ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಕೋಳಿಯನ್ನು ಸರಿಯಾಗಿ ಬೇಯಿಸಿ ತಿಂದರೆ, ಕೋಳಿಗೆ ಹಕ್ಕಿ ಜ್ವರ ಇದ್ದರೂ ಸಹ ಅದು ಮನುಷ್ಯರಿಗೆ ಅದರ ಸೋಂಕು ತಗುಲುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಸಂಪೂರ್ಣವಾಗಿ ಮಾಂಸವನ್ನು ಬೇಯಿಸಿದ ನಂತರ ಸೇವಿಸುವುದು ಉತ್ತಮ.

ಬಿಸಿ ಇರುವಾಗಲೇ ತಿನ್ನುವುದು:

ಮಾಂಸ ಅಥವಾ ಇತರ ಬೇಯಿಸಿದ ಆಹಾರಗಳನ್ನು ಇನ್ನೂ ಬಿಸಿಯಾಗಿರುವಾಗಲೇ ತಿನ್ನುವುದು ಸೂಕ್ತ ಎಂದು ಹೇಳಲಾಗುತ್ತದೆ. ಮಾಂಸವನ್ನು ಸ್ವಚ್ಛವಾಗಿ ತೊಳೆದ ನಂತರವೇ ಬೇಯಿಸಬೇಕು. ಹಸಿ ಮಾಂಸವನ್ನು ಫ್ರಿಡ್ಜ್​ನಲ್ಲಿ ಇಡಬಹುದು ಆದಾಗ್ಯೂ ಅದನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಿ ಮುಚ್ಚಳವನ್ನು ಸರಿಯಾಗಿ ಹಾಕಿ ಇಡಬೇಕು. ನೀವು ಚಿಕನ್ ಮತ್ತು ಮಟನ್​ನಂತಹ ಬೇಯಿಸಿದ ಮಾಂಸವನ್ನು ಫ್ರಿಡ್ಜ್​​​ನಲ್ಲಿ ಇಟ್ಟರೆ, ಅವುಗಳನ್ನು ಹೊರತೆಗೆದ ತಕ್ಷಣ ಬಿಸಿ ಮಾಡಿ ಮತ್ತು ಅವು ತಣ್ಣಗಾಗುವ ಮೊದಲು ತಿನ್ನಬೇಕು. ಅದನ್ನು ಬಿಸಿ ಮಾಡಿ, ಸ್ವಲ್ಪ ತಿಂದು ಮತ್ತೆ ಫ್ರಿಡ್ಜ್‌ನಲ್ಲಿ ಇಡಬಾರದು.

ಬೇಯಿಸಿದ ಮೊಟ್ಟೆ ಮತ್ತು ಮಾಂಸ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 70 ಡಿಗ್ರಿ ತಾಪಮಾನದಲ್ಲಿ ವೈರಸ್ ಸಾಯುತ್ತದೆ ಮತ್ತು ನಾವು ಅದನ್ನು 100 ಡಿಗ್ರಿ ತಾಪಮಾನದಲ್ಲಿ ಬೇಯಿಸುತ್ತೇವೆ ಇದರಿಂದಾಗಿ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ

ಮಾಂಸ ಬೇಯಿಸುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ತಾಪಮಾನವು ಕನಿಷ್ಠ 75 ಡಿಗ್ರಿ ಸೆಲ್ಸಿಯಸ್ ಆಗಿರಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹೇಳಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net