ಭಾರಿ ಗಾಳಿ ಮಳೆಗೆ ಮರಗಳು ಧರೆಗೆ

Damage
ಪಟ್ರಮೆ ಭಾಗದಲ್ಲಿ ಭಾರಿ ಗಾಳಿಗೆ ಮನೆಯ ಮೇಲೆ ಬಿದ್ದ ಮರ
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಶುಕ್ರವಾರ ಬೆಳಗಿನ ಜಾವ ಹಾಗೂ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಕೊಕ್ಕಡ, ನೆಲ್ಯಾಡಿ, ನಿಡ್ಲೆ, ಅರಸಿನಮಕ್ಕಿ, ಶಿಬಾಜೆ, ಶಿಶಿಲ, ಪಟ್ರಮೆ, ಪೆರಿಯಶಾಂತಿ, ಗುಂಡ್ಯ, ಶಿರಾಡಿ ಭಾಗಗಳಲ್ಲಿ ಹಲವು ಮರಗಳು ಧರೆಗುರುಳಿವೆ. ಮಳೆಯೊಂದಿಗೆ ವಿಪರೀತ ಗಾಳಿ ಬೀಸಿದ್ದು ಬೃಹತ್ ಗಾತ್ರದ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ.

ಅನಾರು 5 ಸೆಂಟ್ಸ್ ಕಾಲನಿಯ ಎರಡು ಮನೆಗಳಿಗೆ ಹಾನಿಯಾಗಿದೆ. ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯ ಸಂಪಿಗೆತಡಿ 2, ಪಡುಬೆಟ್ಟು ಬೀದಿಮಜಲು 3 ,ಉದನೆ 1, ಎಣ್ಣೆತೋಡಿ 2 , ಹಾರ್ಪಳ 1 ವಿದ್ಯುತ್ ಕಂಬ ತುಂಡಾಗಿದೆ. ಕೊಕ್ಕಡ ಮೆಸ್ಕಾಂ ಶಾಖೆಯ ಮುದ್ದಿಗೆ ಹಾಗೂ ಪಿಜಿನಡ್ಕ ಎಂಬಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net