ಬೆಳ್ತಂಗಡಿ: ತಾಲೂಕಿನಾದ್ಯಂತ ಕೆಲ ದಿನಗಳಿಂದ ಭಾರಿ ಗಾಳಿ-ಮಳೆಯಾಗುತ್ತಿದ್ದು, ಗುರುವಾರ ರಾತ್ರಿ ಸುರಿದ ಗಾಳಿ-ಮಳೆಗೆ ಪಟ್ರಮೆಯ ಅನಾರಿನ ಎರಡು ಮನೆಗಳಿಗೆ ಹಾನಿಯಾಗಿದೆ.
ಮಾಲಾಡಿ ಒಡರ್ ಲಚ್ಚಿಲ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ಹಾನಿಯಾಗಿದ್ದು ರಸ್ತೆಗೆ ಮರ ಬಿದ್ದು ರಸ್ತೆ ತಡೆಯಾಗಿದೆ. ಕೊಲ್ಪದಬೈಲು ಪೆಟ್ರೋಲ್ ಪಂಪ್ ಸಮೀಪ ಎರಡು ಕಡೆ, ಗಾಳಿ-ಮಳೆಗೆ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡಚಣೆಯಾಗಿದ್ದು ಮೆಸ್ಕಾಂ ಸಿಬ್ಬಂದಿ ತಕ್ಷಣ ಬಂದು ತೆರವುಗೊಳಿಸಿದರು.