ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಬಿದ್ದ ಮರ, ಚಾಲಕ ಸ್ಥಳದಲ್ಲೇ ಸಾವು; ಪ್ರಯಾಣಿಕ ಪ್ರಾಣಾಪಾಯದಿಂದ ಪಾರು...

Auto Driver
Published on

ಮೈಸೂರು: ಯಮನ ಪಾಶ ಎಲ್ಲಿ ಹೇಗೆ ಉರುಳಾಗಿ ಬಂದು ಪ್ರಾಣವನ್ನು ತೆಗೆದುಕೊಂಡು ಹೋಗುವುದೋ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇಲ್ಲೊಂದು ಆಟೋರಿಕ್ಷಾ ಚಲಿಸುತ್ತಿದ್ದಾಗಲೇ ಆಟೋಚಾಲಕನ ಉಸಿರು ನಿಂತುಹೋಗಿದೆ.

ಮೈಸೂರಿನ ಬನ್ನಿಮಂಟಪದ ಹಲೀಮ್​ನಗರ ನಿವಾಸಿ ಇಜಾಜ್ ಪಾಷಾ (42) ಮೃತಪಟ್ಟ ಆಟೋಚಾಲಕ. ಮೈಸೂರು-ಬೆಂಗಳೂರು ರಸ್ತೆಯ ಫೈವ್​ಲೈಟ್​ ವೃತ್ತದಲ್ಲಿ ಗುರುವಾರ ರಾತ್ರಿ ಈ ದುರಂತ ಸಂಭವಿಸಿದೆ.

ಇಜಾಜ್​ ಸುರಿಯುತ್ತಿದ್ದ ಮಳೆಯ ನಡುವೆಯೇ ಆಟೋರಿಕ್ಷಾ ಓಡಿಸುತ್ತಿದ್ದು, ಚರ್ಚ್​ ಕಡೆಯಿಂದ ಫೈವ್​ಲೈಟ್​ ವೃತ್ತದ ಕಡೆಗೆ ಬರುತ್ತಿದ್ದಾಗ, ಚಲಿಸುತ್ತಿದ್ದ ಆ ಆಟೋ ಮೇಲೆಯೇ ಮರವೊಂದು ಬಿದ್ದಿದೆ. ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದರೆ, ಪ್ರಯಾಣಿಕ ಸಣ್ಣಪುಟ್ಟ ಗಾಯಗಳಿಗೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net